Publish Date: Sun, 27 Feb 2022 (06:30 IST)
Updated Date: Sun, 27 Feb 2022 (00:33 IST)
ಬೆಳಗಾವಿ : ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಪೆಟ್ರೋಲ್ ಬಂಕ್ ಮಾಲೀಕನಿಗೆ ಬರೋಬ್ಬರಿ 44 ಲಕ್ಷ ರೂ. ವಂಚನೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ಬೆಳಗಾವಿಯ ಮಚ್ಚೆಯಲ್ಲಿರುವ ಸೋಮನಾಥ್ ಪೆಟ್ರೋಲ್ ಬಂಕ್ನ ಮಾಲೀಕ ಸುನೀಲ್ ಶಿಂಧೆ ಮೋಸ ಹೋದವರು. ಬೆಳಗಾವಿಯ ನಿವಾಸಿ ರೋಹಿತ್ ರಾಜು ಎಂಬಾತ ಕಳೆದ ಮೂರು ವರ್ಷದಿಂದ ಸುನೀಲ್ ಶಿಂಧೆಯ ಪೆಟ್ರೋಲ್ ಬಂಕ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ಒಂದೂವರೆ ವರ್ಷದಲ್ಲಿ ಮಾಲೀಕರಿಗೆ 44 ಲಕ್ಷ ರೂ. ಹಣವನ್ನು ಫೋನ್ ಪೇ ಮೂಲಕ ವಂಚನೆ ಮಾಡಿ ಸಿಕ್ಕಿಹಾಕಿಕೊಂಡಿದ್ದಾನೆ.
ಆಗ ಅವರಿಗೆ ಹಣವನ್ನು ಹಿಂತಿರುಗಿಸಬೇಕಾಗುತ್ತದೆ. ಇದನ್ನೇ ದುರ್ಬಳಕೆ ಮಾಡಿಕೊಂಡ ರೋಹಿತ್ ರಿಫಂಡ್ ಆಪ್ಷನ್ ಬಳಸಿಕೊಂಡು ನಿತ್ಯವೂ ತನ್ನ ನಂಬರ್ನಿಂದ ಪಂಪ್ನ ನಂಬರ್ಗೆ ಎಂಟು, ಹತ್ತು ಸಾವಿರ ಫೋನ್ ಪೇ ಮಾಡಿ ಮಾಲೀಕನಿಗೆ ಲೆಕ್ಕವನ್ನೂ ಕೊಡುತ್ತಿದ್ದ.
ಇದಾದ ಬಳಿಕ ರಾತ್ರಿ ಮನೆಗೆ ವಾಪಾಸ್ ಆಗುವಾಗ ಪಂಪ್ನ ನಂಬರ್ನಿಂದ ಮತ್ತೆ ತನ್ನ ಅಕೌಂಟ್ಗೆ ತಾನು ಹಾಕಿದ ಹಣವನ್ನು ರಿಫಂಡ್ ಮಾಡಿಕೊಂಡು ಕಳೆದ ಒಂದೂವರೆ ವರ್ಷದಲ್ಲಿ 44 ಲಕ್ಷ ರೂ.ಹಣವನ್ನು ಎಗರಿಸಿದ್ದಾನೆ.
ಇತ್ತ ದಿನೇ ದಿನೇ ಲಾಸ್ ಆಗುವ ಕಾರಣಕ್ಕೆ ಕಂಗಾಲಾದ ಮಾಲೀಕ ಬೆಳಗಾವಿಯ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.