ಕೊರೊನಾ ವೈರಸ್ ಅಟ್ಟಹಾಸದ ನಡುವೆ ಮತ್ತೊಬ್ಬ ಬಾಲಿವುಡ್ ನಟ ನಿಧನರಾಗಿದ್ದಾರೆ.
ಹಿಂದಿ ಹಾಗೂ ಪಂಜಾಬಿ ಚಲನಚಿತ್ರಗಳಲ್ಲಿ ಹೆಸರು ಮಾಡಿದ್ದ ರಂಜನ್ ಸೆಹಗಲ್ ಸಾವನ್ನಪ್ಪಿದ್ದಾರೆ.
ಅನಾರೋಗ್ಯ ಹಾಗೂ ಬಹು ಅಂಗಾಂಗ ವೈಫಲ್ಯದಿಂದಾಗಿ ರಂಜನ್ ಅಗಲಿದ್ದಾರೆ.
ಚಂಡೀಗಢದಲ್ಲಿ ನೆಲೆಸಿದ್ದ ನಟ ರಂಜನ್, ಸರ್ಬಜಿತ್, ಮಾಹಿ ಎನ್ ಆರ್ ಐ ಚಿತ್ರಗಳಲ್ಲಿ ನಟಿಸಿದ್ದರು. ಅಲ್ಲದೇ ಕ್ರೈಂ ಪೆಟ್ರೋಲ್ ಸೇರಿದಂತೆ ಹಲವು ಧಾರವಾಹಿ, ಸಂಚಿಕೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!