Webdunia - Bharat's app for daily news and videos

Install App

ಸಚಿವರ ಮಕ್ಕಳ ಒತ್ತಡಕ್ಕೆ ಈ ವಿಜಯೋತ್ಸವ ಆಚರಿಸಲಾಯಿತೇ: ಶೋಭಾ ಕರಂದ್ಲಾಜೆ

Krishnaveni K
ಗುರುವಾರ, 5 ಜೂನ್ 2025 (16:28 IST)
ಬೆಂಗಳೂರು: ಆರ್.ಸಿ.ಬಿ. ಗೆಲುವಿನ ವಿಜಯೋತ್ಸವವು ಕ್ರಿಮಿನಲ್ ಕ್ರಮ ಎಂದು ಕೇಂದ್ರ ಸಚಿವರಾದ ಕು. ಶೋಭಾ ಕರಂದ್ಲಾಜೆ ಅವರು ಆಕ್ಷೇಪಿಸಿದ್ದು, ಕಾಲ್ತುಳಿತದ ದುರಂತ, 11 ಜನರ ಸಾವಿಗೆ ಸಂಬಂಧಿಸಿ ಈ ರಾಜ್ಯ ಸರಕಾರ ತಕ್ಷಣ ರಾಜೀನಾಮೆ ಕೊಡಬೇಕು ಎಂಬುದಾಗಿ ಆಗ್ರಹಿಸಿದ್ದಾರೆ.

ಇಂದು ಬೌರಿಂಗ್ ಆಸ್ಪತ್ರೆಗೆ  ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದೊಂದು ಕೊಲೆಗಡುಕ ಸರಕಾರ ಎಂದು ಟೀಕಿಸಿದರು. ಗುಜರಾತಿನ ಸ್ಟೇಡಿಯಂನಲ್ಲಿ ನರೇಂದ್ರ ಮೋದಿಜೀ ಅವರ ಕಾರ್ಯಕ್ರಮಕ್ಕೆ 5 ಲಕ್ಷ ಜನರು ಸೇರಿದ್ದರು. ಏನೂ ಆಗಲಿಲ್ಲ; ಕರ್ನಾಟಕದಲ್ಲೂ ಇಂಥ ದೊಡ್ಡ ಕಾರ್ಯಕ್ರಮಗಳಾಗಿದ್ದರೂ ಆಗ ಏನೂ ಆಗಿರಲಿಲ್ಲ ಎಂದು ಗಮನ ಸೆಳೆದರು.


ಅಲ್ಲು ಅರ್ಜುನ್ ಅವರ ಚಲನಚಿತ್ರದ ಪ್ರಮೋಷನ್ ಸಂದರ್ಭದಲ್ಲಿ ಒಬ್ಬರು ಮೃತಪಟ್ಟಾಗ ಅಲ್ಲಿನ ಸರಕಾರ ಅಲ್ಲು ಅರ್ಜುನ್
ಅವರನ್ನು ಮನೆಯಿಂದ ಎಳೆದುಕೊಂಡು ಬಂದಿತ್ತು. ನೀವು ಯಾರನ್ನು ಎಳೆದುಕೊಂಡು ಬಂದಿದ್ದೀರಿ ಎಂದು ಪ್ರಶ್ನಿಸಿದರು. ಉಪ ಮುಖ್ಯಮಂತ್ರಿಗಳು ಕಪ್ ಎತ್ತಿಕೊಂಡು ಚುಂಬಿಸಿಕೊಂಡು ಓಡಾಡುವ ಅಗತ್ಯ ಏನಿತ್ತು ಎಂದು ಕೇಳಿದರು.


ಬೆಂಗಳೂರಿನ ಡಿ.ಸಿ. ಎಂದರೆ ಅವರು ಬೆಂಗಳೂರಿನ ಇನ್ ಚಾರ್ಜ್ ಅಧಿಕಾರಿ. ಅವರಿಂದ ಯಾವುದೇ ತನಿಖೆ ಮಾಡಲು ಆಗದು. ಇದೊಂದು ಮೋಸದ ಕ್ರಮ ಎಂದು ಆಕ್ಷೇಪಿಸಿದರು. ಹೈಕೋರ್ಟಿನ ಕಾರ್ಯನಿರತ ಜಡ್ಜ್ ಮೂಲಕ ದುರ್ಘಟನೆಯ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.


ಜನರ ಪ್ರಾಣಕ್ಕೆ ಯಾರು ರಕ್ಷಕರಿದ್ದರು? ಎಂದ ಅವರು, ಆನ್‍ಲೈನ್ ಪಾಸ್ ನೀಡಿ ಬಳಿಕ ಅವನ್ನು ರದ್ದು ಮಾಡಿದ್ದರು. ಚಿನ್ನಸ್ವಾಮಿ ಸ್ಟೇಡಿಯಂ ಗೇಟನ್ನು ಮೊದಲೇ ತೆರೆದಿದ್ದರೆ ಇವರ್ಯಾರೂ ಸಾಯುತ್ತಿರಲಿಲ್ಲ ಎಂದು ತಿಳಿಸಿದರು. ಸಚಿವರ ಮಕ್ಕಳ ಒತ್ತಡಕ್ಕೆ ಈ ವಿಜಯೋತ್ಸವ ಆಚರಿಸಲಾಯಿತೇ ಎಂದು ಅವರು ಕೇಳಿದರು<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಉಪರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಘೋಷಿಸಿದ ಬೆನ್ನಲ್ಲೇ ಪ್ರಧಾನಿ ಭೇಟಿಯಾದ ಸಿಪಿ ರಾಧಾಕೃಷ್ಣನ್

ಅತ್ಯಾಚಾರ ಆರೋಪ: ಶಿವಸೇನಾ ಮಾಜಿ ಶಾಸಕನ ವಿರುದ್ಧ ಬೆಂಗಳೂರಿನ ಮಹಿಳೆ ದೂರು

ಬೀದಿ ನಾಯಿ ಪರ ಹೋರಾಟ ಮಾಡುವವರ ಈ ಸುದ್ದಿ ಓದಲೇ ಬೇಕು, ಇದ್ದ ಮನೆ ಮಗಳನ್ನೇ ಕಳೆದುಕೊಂಡ ಕುಟುಂಬ

ಕಂಬಕ್ಕೆ ಕಟ್ಟಿ ಯೋಧನ ಮೇಲೆ ಏಕಾಏಕಿ ದಾಳಿ ನಡೆಸಿದ ಗುಂಪು, Viral Video

ಬಿಪಿಎಲ್ ಕಾರ್ಡ್ ಪರಿಷ್ಕರಣೆ ಬಗ್ಗೆ ಸಚಿವರಿಂದ ಬಿಗ್ ಅಪ್ ಡೇಟ್

ಮುಂದಿನ ಸುದ್ದಿ
Show comments