Daily Horoscope

Select Your Language

Notifications

webdunia
webdunia
webdunia
webdunia

ಆರ್‌ಎಸ್‌ಎಸ್‌ ದೆವ್ವವಿದ್ದಂತೆ ಎಂದ ಪ್ರಿಯಾಂಕ್ ಖರ್ಗೆ ಪರ ಬ್ಯಾಟ್ ಬೀಸಿದ ಶಿವರಾಜ ತಂಗಡಗಿ

Minister Shivaraj Thangady
Photo Credit X
ಕೊಪ್ಪಳ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಕುರಿತು ಸಚಿವ ಪ್ರಿಯಾಂಕ್‌ ಖರ್ಗೆ ದೆವ್ವ ಎಂದು ಸರಿಯಾಗಿಯೇ ಹೇಳಿಕೆ ನೀಡಿದ್ದಾರೆಂದು ಹಿಂದುಳಿದ ವರ್ಗಗಳ ಖಾತೆ ಸಚಿವ ಶಿವರಾಜ ತಂಗಡಗಿ ಸಮರ್ಥಿಸಿಕೊಂಡಿದ್ದಾರೆ. 

ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮತ್ತೊಬ್ಬರ ಮೇಲೆ ಇಡಿ, ಐಟಿ, ಸಿಬಿಐ ದಾಳಿ ಮಾಡುವ ಬದಲು ಆರ್‌ಎಸ್‌ಎಸ್‌ ಕಚೇರಿ ಮೇಲೆ ಮೊದಲು ದಾಳಿ ನಡೆಸಲಿ ಎಂದು ಹೇಳಿದರು.

ಯಾವತ್ತಿದ್ದರೂ ಲೆಕ್ಕ ಕೊಡಬೇಕಿರುವ ಆರ್‌ಎಸ್‌ಎಸ್‌, 100 ವರ್ಷಗಳನ್ನು ಪೂರೈಸಿರುವ ಸಂಸ್ಥೆಗೆ ಎಲ್ಲಿಂದ್ದ ಹಣ ಬರುತ್ತಿದೆ ಎಂದು ಹೇಳಬೇಕು. ಯಾರೆಲ್ಲ ಹಣ ಕೊಡುತ್ತಾರೆ ಎನ್ನುವುದು ಬಹಿರಂಗವಾಗಬೇಕಿದೆ ಎಂದರು. 

ಸಣ್ಣ ಸಂಸ್ಥೆಯಾದರೂ ನೋಂದಣಿ ಮಾಡಿಕೊಳ್ಳಬೇಕು. ದೊಡ್ಡ ಸಂಸ್ಥೆಯಾದರೂ ಯಾಕೆ ನೋಂದಣಿಯಾಗಿಲ್ಲ, ಆರ್‌ಎಸ್‌ಎಸ್‌ ಕಚೇರಿ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳು ದಾಳಿ ನಡೆಸಿ ಹಣದ ಮೂಲ ಪತ್ತೆ ಹಚ್ಚಲಿ ಎಂದು ಒತ್ತಾಯಿಸಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ಮುಸ್ಲಿಂರನ್ನು ಗುರಿಯಾಗಿಸಿ ಗುಂಡು ಹಾರಿಸುತ್ತಿರುವ ಘಟನೆ, ಅಸ್ಸಾಂ ಸಿಎಂ ವಿರುದ್ಧ ಮಹತ್ವದ ತೀರ್ಪು