Publish Date: Sun, 23 Jun 2019 (10:52 IST)
Updated Date: Sun, 23 Jun 2019 (10:56 IST)
ರಾಯಚೂರು : ಅನುದಾನ ಕೊಡೋದು ಒಂದು ಕಡೆ ಆದರೆ ಮಲಗೋದು ಮತ್ತೊಂದು ಕಡೆ ಎಂದು ಸಿಎಂ ಕುಮಾರಸ್ವಾಮಿಯವರ ಗ್ರಾಮವಾಸ್ತವ್ಯದ ವಿರುದ್ಧ ದೇವದುರ್ಗದ ಬಿಜೆಪಿ ಶಾಸಕ ಶಿವನಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ , ರಾಮನಗರ, ಮಂಡ್ಯ ಜಿಲ್ಲೆಗೆ ಮಾತ್ರ 20-30 ಸಾವಿರ ಕೋಟಿ ಹಣ ರಿಲೀಸ್ ಮಾಡಿದ್ದಾರೆ. ಅನುದಾನ ಅಲ್ಲಿಗೆ ಆದರೆ ಬಂದು ಮಲಗೋದು ಉತ್ತರ ಕರ್ನಾಟಕದಲ್ಲಿ ಎಂದು ಕಿಡಿಕಾರಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಭೇದಭಾವ ಮಾಡುತ್ತಿದ್ದಾರೆ.ಮುಖ್ಯ ಮಂತ್ರಿ ರಾಯಚೂರಿಗೆ ಬಂದಾಗ ಮನವಿ ಸಲ್ಲಿಸ್ತೇನೆ. ಪಾದಯಾತ್ರೆಯ ಮೂಲಕ ತೆರಳಿ ಅವರಿಗೆ ಮನವಿ ಸಲ್ಲಿಸುತ್ತೇನೆ ಎಂದು ಶಾಸಕ ಶಿವನಗೌಡ ಹೇಳಿದ್ದಾರೆ.