ಬೆಂಗಳೂರು: ದಸರಾ ಉದ್ಘಾಟನೆಯನ್ನು ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದ ವಿಚಾರದ ಸಂಬಂಧ ಭುಗಿಲೆದ್ದ ವಿವಾದದ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಇಂದು ಉದ್ಘಾಟನೆಗೆ ಗೈರಾಗಿರುವುದು ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಇನ್ನು ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿದ್ದಕ್ಕೆ ಹುಟ್ಟಿಕೊಂಡ ವಿವಾದ ಸಂಬಂಧ ಡಿಕೆ ಶಿವಕುಮಾರ್ ಅವರು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.
ಮೈಸೂರಿನ ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎನ್ನುವ ಮೂಲಕ ಬಿಜೆಪಿಯವರಿಗೆ ತಿರುಗೇಟು ನೀಡಿದ್ದರು.
ಆದರೆ ಈ ಎಲ್ಲ ಬೆಳವಣಿಗೆ ನಡುವೆ ಇಂದು ಆರಂಭವಾದ ದಸರಾ ಉದ್ಘಾಟನೆಗೆ ಡಿಕೆ ಶಿವಕುಮಾರು ಗೈರಾಗಿರುವುದು ಕುತೂಹಲ ಮೂಡಿಸಿದೆ.
ಡಿಕೆಶಿ ಗೈರು ಉದ್ದೇಶಪೂರ್ವಕವೇ ಅಥವಾ ಇತರ ಕಾರಣದಿಂದಲೇ ಎಂಬ ವಿಚಾರವಾಗಿ ಚರ್ಚೆಗಳು ಶುರುವಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ದೆಹಲಿಗೆ ತೆರಳಿದ್ದಾರೆ. ಇಲಾಖಾ ವಿಚಾರವಾಗಿ ದೆಹಲಿ ವಿಮಾನ ಏರಿದ್ದಾರೆ. ಆದರೆ, ಇದೇ ಸಂದರ್ಭದಲ್ಲಿ ನಾಡ ಹಬ್ಬ ಐತಿಹಾಸಿಕ ದಸರಾ ಉದ್ಘಾಟನೆಗೆ ಡಿಕೆಶಿ ಗೈರಾಗಿದ್ದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.