Publish Date: Tue, 22 Jan 2019 (09:09 IST)
Updated Date: Tue, 22 Jan 2019 (09:11 IST)
ಬೆಂಗಳೂರು: ನಮ್ಮನ್ನಗಲಿದ ಹಿರಿಯ ಚೇತನ, ನಡೆದಾಡುವ ದೇವರು ಶಿವಕುಮಾರ ಸ್ವಾಮೀಜಿ ಬದುಕಿನುದ್ದಕ್ಕೂ ಪರರ ಸೇವೆಗಾಗಿ ಬದುಕು ಸವೆಸಿದವರು. ತಮ್ಮ ಮಠವೇ ಅವರಿಗೆ ಸರ್ವಸ್ವವಾಗಿತ್ತು.
ಹೀಗಾಗಿ ಬದುಕಿನ ಕೊನೆಯ ಕ್ಷಣಗಳಲ್ಲಿ ಅವರನ್ನು ಉಳಿಸಲು ಆಸ್ಪತ್ರೆಗೆ ಕರೆದೊಯ್ದಿದ್ದರೂ ಅವರಿಗೆ ಮಠದಲ್ಲೇ ಕೊನೆಯ ಕ್ಷಣಗಳನ್ನು ಕಳೆಯಬೇಕೆಂಬ ಆಸೆಯಿತ್ತು. ಅಲ್ಲಿ ಎಂದಿನಂತೆ ತಮ್ಮ ಕೊನೆಯ ಉಸಿರು ಇರುವವರೆಗೂ ತಮ್ಮ ನಿತ್ಯದ ಪೂಜೆ ಮಾಡುತ್ತಲೇ ಇರಬೇಕೆಂಬ ಮನೋಭಾವವಿತ್ತು.
ಅದೇ ಕಾರಣಕ್ಕೆ ತಮ್ಮನ್ನು ಮತ್ತೆ ಮಠಕ್ಕೆ ಕರೆದೊಯ್ಯುವಂತೆ ಅವರು ಒತ್ತಾಯಿಸಿದರು. ಅವರ ಆಸೆಯಂತೇ ಅವರನ್ನು ಆಸ್ಪತ್ರೆಯಿಂದ ಮಠಕ್ಕೆ ಕರೆದೊಯ್ಯಲಾಯಿತು. ಅವರ ಆಸೆಯಂತೇ ಸಿದ್ಧಗಂಗಾ ಮಠದಲ್ಲಿಯೇ ಕೊನೆಯುಸಿರೆಳೆದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ