ಇಂದು ವೀರಶೈವ ಲಿಂಗಾಯತ ಮಹಾವೇದಿಕೆ ವತಿಯಿಂದ ನಗರದ ಬಸವ ಸಮಿತಿ ಮಂಟಪದಲ್ಲಿ ಡಾ, ಶಿವಕುಮಾರ್ ಮಹಾಸ್ವಾಮಿಗಳ ಗುರುವಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇನ್ನು ಕಾರ್ಯಕ್ರಮದಲ್ಲಿ ಭಾರತೀಯ ಅಂಚೆ ಇಲಾಖೆ ಹೊರತಂದಿರುವ ವಿಶೇಷ ಅಂಚೆ ಲಕೋಟಿ ಹಾಗೂ 111 ಗ್ರಾಮಗಳಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಪೂಜ್ಯರ ಶಿವಕುಮಾರ್ ಮಹಾ ಸ್ವಾಮಿಗಳ ಪ್ರತಿಮೆಯನ್ನು ತುಮಕೂರು ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು, ಹಾಗೂ ಸುತ್ತೂರುಮಠದ ಶಿವರಾತ್ರಿ ದೇಶೀ ಕೇಂದ್ರ ಸ್ವಾಮೀಜಿಗಳು ಅನಾವರಣ ಮಾಡಿದರು. ಇನ್ನೂ ಕಾರ್ಯಕ್ರಮದಲ್ಲಿ ಶಾಸಕ ವಿನಯ್ ಕುಲಕರ್ಣಿ, ಪೋಸ್ಟ್ ಮಾಸ್ಟರ್ ಜನರಲ್ ಎಲ್, ಕೆ ಡ್ಯಾಶ್, ಹಾಗೂ ವೀರಶೈವ ಮಹಾಸಭಾ ಯುವ ಘಟಕ ಅಧ್ಯಕ್ಷ ಪ್ರಶಾಂತ ಕಲ್ಲೂರು ಭಾಗಿಯಾಗಿರು. ಇನ್ನೂ ಇದೆ ಸಂರ್ಭದಲ್ಲಿ ಮಾತನಾಡಿದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಶಿವಕುಮಾರ್ ಶ್ರೀಗಳ ಕೊಡುಗೆ ಸಮಾಜಕ್ಕೆ ಅಪಾರವಾದದ್ದು ಶ್ರೀಗಳ ಹೆಸರಿನಲ್ಲಿ ಅಂಚೆ ಇಲಾಖೆಯ ಲಕೋಟಯನ್ನು ಬಿಡುಗಡೆ ಮಾಡಿರೋದು ಒಳ್ಳೆಯ ವಿಚಾರ ಎಂದು ತಿಳಿಸಿದರು.