Select Your Language

Notifications

webdunia
webdunia
webdunia
webdunia

ವರುಣಾರ್ಭಟಕ್ಕೆ ಕುಸಿದ ಗೋಡೆ!,

Collapsed wall for Varunarbhata
chikamangluru , ಶನಿವಾರ, 29 ಜುಲೈ 2023 (17:50 IST)
ವರುಣನ ಅವಾಂತರಕ್ಕೆ ಕಾಂಪೌಂಡ್ ಕುಸಿದಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಕೊಪ್ಪ ತಾಲೂಕಿನ ಬಸರಿಕಟ್ಟೆ ಗ್ರಾಮದಲ್ಲಿ ಬಾಲಕರ ವಿದ್ಯಾರ್ಥಿ ನಿಲಯದ ಕಾಂಪೌಂಡ್ ದಿಢೀರ್ ಕುಸಿದಿದೆ. ಕಾಂಪೌಂಡ್ ಕುಸಿಯುವ ದೃಶ್ಯ ವಿದ್ಯಾರ್ಥಿಗಳ ಮೊಬೈಲ್‌ನಲ್ಲಿ ಸೆರೆಯಾಗಿದೆ. ಇನ್ನು, ಇತ್ತ ಮಳೆಯ ಅಬ್ಬರಕ್ಕೆ ಜಯಪುರ ಶೃಂಗೇರಿ ರಸ್ತೆಯು ಕುಸಿಯುವ ಹಂತ ತಲುಪಿದ್ದು, ಅಲ್ಲಿನ ಕಿರು ಸೇತುವೆಯೂ ಹಾನಿಗೊಳಗಾಗಿದೆ. ಕೊಳೂರು ಬಳಿಯಿರುವ ಸೇತುವೆ ಕುಸಿಯುವ ಭೀತಿಯಿದ್ದು, ಜನಸಾಮಾನ್ಯರು ಜೀವ ಕೈಯಲ್ಲಿ ಹಿಡಿದು ಓಡಾಡೋ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಯಾವುದೇ ಅನಾಹುತ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿರುವ ಪೊಲೀಸರು ಸೇತುವೆ ಬಳಿ ಶೃಂಗೇರಿ ರಸ್ತೆಯಲ್ಲಿ ಬ್ಯಾರಿಕೇಡ್​ಗಳನ್ನಿಟ್ಟು ಸೆಕ್ಯೂರಿಟಿ ಸಿಬ್ಬಂದಿ ನಿಯೋಜಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೇಮ ನಿರಾಕರಣೆ, ಯುವಕ ಆತ್ಮಹತ್ಯೆ