Publish Date: Sat, 29 Jul 2023 (19:05 IST)
Updated Date: Sat, 29 Jul 2023 (17:31 IST)
ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ನಿರಂತರ ಮಳೆಯಾದ ಹಿನ್ನೆಲೆ, ಹಲವೆಡೆ ಮನೆಗಳು ಧರೆಗುರುಳಿದ್ದಾವೆ. ಶಿವಮೊಗ್ಗ ಜಿಲ್ಲೆಯ ಹೊಸನಗರ, ಸೊರಬ, ಭದ್ರಾವತಿ ತಾಲೂಕಿನ ಗ್ರಾಮಗಳಲ್ಲಿ ಮನೆಗಳು ಕುಸಿತವಾಗಿವೆ. ಸಾಗರ ತಾಲೂಕಿನ ತಾಳಗುಪ್ಪ ಹೋಬಳಿಯಲ್ಲಿ ಜಮೀನು ಜಲಾವೃತವಾಗಿದೆ. ಶರಾವತಿ ಹಿನ್ನೀರಿನ ಕಣಿವೆ ಪ್ರದೇಶದಲ್ಲಿ ನಿರಂತರ ಮಳೆಯಾಗಿದ್ದು, ಹೊಲ-ಗದ್ದೆಗಳೆಲ್ಲ ಜಲಾವೃತವಾಗಿವೆ. ಬಿತ್ತನೆ ಮಾಡಿದ ಸಸಿಯ ಮಡಿಗಳೆಲ್ಲ ನೀರು ಪಾಲಾಗಿವೆ. ವಿದ್ಯುತ್ ಕಂಬಗಳು ಧರೆಗುರುಳಿದ ಪರಿಣಾಮ ಕರೂರು ಹೋಬಳಿಯ ಹಿನ್ನೀರು ಪ್ರದೇಶ ಕಗ್ಗತ್ತಲೆಯಲ್ಲಿ ಮುಳುಗಿದೆ. ಇದರಿಂದ ಜನರು ಪರದಾಡುವಂತಾಯಿತು. ನೆಟ್ವರ್ಕ್ ಸಂಪರ್ಕವೂ ಕೂಡ ಕಡಿತವಾಗಿದೆ.