ಶಿರೂರು ಶ್ರೀಗಳ ಆಭರಣ; ಊಟ ಕೊಡುತ್ತಿದ್ದವಳ ಮೈಮೇಲೆ ಬಂದದ್ದು ಹೇಗೆ?

Webdunia
ಶನಿವಾರ, 21 ಜುಲೈ 2018 (19:25 IST)
ಶಿರೂರು ಶ್ರೀಗಳ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಶ್ರೀಗಳ ಸಾವಿನಲ್ಲಿ ಯಾರೆಲ್ಲರ ಕೈವಾಡ ಇರಬಹುದು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದರೆ, ಇತ್ತ ಮಾಧ್ಯಮ ಮತ್ತು ಸಾರ್ವಜನಿಕರಲ್ಲೂ ವಿವಿಧ ರೀತಿಯಲ್ಲಿ ಚರ್ಚೆ ನಡೆಯುತ್ತಿದೆ. ಶ್ರೀಗಳ ಅಸಹಜ ಸಾವಿನ ಚರ್ಚೆ ಹಲವಡೆ ಹಲವು ರೀತಿಯಲ್ಲಿ ಸುತ್ತಿ ಈಗ ಒಂದು ಹೆಣ್ಣಿನ ಬಳಿ ಬಂದು ನಿಂತಿದೆ ಹೆಣ್ಣು ಮತ್ತಾರು ಅಲ್ಲ ಶ್ರೀಗಳಿಗೆ ಫಲಹಾರ, ಊಟ ತಂದು ಕೊಡುತ್ತಿದ್ದ ಮಣಿಪಾಲದ ಮಹಿಳೆ ರಮ್ಯಾ ಶೆಟ್ಟಿ.

 
ರಮ್ಯಾ ಶೆಟ್ಟಿ ಪ್ರತಿದಿನ ಶೀರೂರು ಶ್ರೀಗಳಿಗೆ ಊಟ ತಂದು ಕೊಡುತ್ತಿದ್ದರಂತೆ. ಶ್ರೀಗಳ ಸಾವಿನ ಪ್ರಕರಣ ಈಗ ರಮ್ಯಾ ಶೆಟ್ಟಿಯ ಸುತ್ತ ಸುಳಿಯಲು ಕಾರಣ ಶೀರೂರು ಶ್ರೀ ತೊಡುತ್ತಿದ್ದ ಚಿನ್ನಾಭರಣವನ್ನ ತೊಟ್ಟು ಫೋಟೊ ಶೂಟ್ ಮಾಡಿದ್ದಾರೆ ಎನ್ನಲಾದ ಫೋಟೋ. ಶೀರೂರು ಸ್ವಾಮೀಜಿಗಳು ಧರಿಸುವ  ಚಿನ್ನದ ಕಡಗ, ಸರ ರಮ್ಯಾ ಶೆಟ್ಟಿ ಹಾಕಿಕೊಂಡು ಫೋಟೋ ತೆಗೆಸಿ ಕೊಂಡಿದ್ದಾರೆ. ಆದರೆ ರಮ್ಯಾ ಶೆಟ್ಟಿ ಧರಿಸಿರುವ ಆಭರಣಗಳು ಶೀರೂರು ಶ್ರೀಗಳದ್ದೇ ಎಂಬ ಬಗ್ಗೆ  ಖಚಿತ ಪಡಿಸಿಕೊಳ್ಳಲು ಪೊಲೀಸರು  ತನಿಖೆ ನಡೆಸುತ್ತಿದ್ದಾರೆ.

ಒಮ್ಮೆ ರಮ್ಯಾ ಶೆಟ್ಟಿ ಧರಿಸಿರುವ ಆಭರಣಗಳು  ಶ್ರೀಗಳದ್ದೇ ಆದಲ್ಲಿ  ಅವು ಮಹಿಳೆಯ ಬಳಿ ಹೇಗೆ ಬಂದವು. ಆಭರಣಗಳೆಲ್ಲವನ್ನೂ ನೀಡುವಷ್ಟು ಆಪ್ತತೆ ರಮ್ಯಾ ಶೆಟ್ಟಿ ಮತ್ತು ಶ್ರೀಗಳ ನಡುವೆ ಇತ್ತೆ? ಇದು ಯಾವ ಪರಿಯ ಆಪ್ತತೆ ಎನ್ನುವ ಪ್ರಶ್ನೆ ಫೋಟೋದಿಂದ ಚರ್ಚೆಯಾಗುತ್ತಿದೆ. ಅಲ್ಲದೆ ರಮ್ಯಾ ಶೆಟ್ಟಿ ಶ್ರೀಗಳಿಗೆ ಊಟವನ್ನ ಆಟೋದಲ್ಲಿ ತಂದು ಕೊಡುತ್ತಿದ್ದವಳು.

ತದನಂತರದಲ್ಲಿ ಕಾರಿನಲ್ಲಿ ಬಂದು ಊಟ ನೀಡುತ್ತಿದ್ದಳು ಎನ್ನಲಾಗುತ್ತಿದ್ದು, ವಿಷಯ ಕೂಡಾ ಈಗ ಚರ್ಚಾ ವಸ್ತುವಾಗಿದ್ದಲ್ಲದೆ, ಅನೇಕ ಅನುಮಾನಗಳಿಗೆ ದಾರಿ ಮಾಡಿ ಕೊಟ್ಟಿದೆ. ಒಟ್ಟಾರೆ ಶ್ರೀಗಳ ಅಸಹಜ ಸಾವಿನ ಪ್ರಕರಣ ಹೊಸ, ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಭಾರೀ ಕುತೂಹಲ ಮೂಡಿಸಿದೆ. ಊಹೆ, ಸಾಧ್ಯತೆಗಳು ಏನೇ ಇದ್ದರೂ ಪೊಲೀಸರ ಸಂಪೂರ್ಣ ತನಿಖೆಯ ನಂತರವಷ್ಟೆ ಸತ್ಯಾಸತ್ಯತೆ ತಿಳಿದು ಬರಬೇಕಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕುರ್ಚಿ ಕದನದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಮಹತ್ವದ ನಿರ್ಧಾರ

Karnataka Weather: ಇಂದು ಈ ಜಿಲ್ಲೆಗಳಲ್ಲಿ ಭಾರೀ ಮಳೆ, ಇಲ್ಲಿದೆ ಹವಾಮಾನ ವರದಿ

ಮೊಬೈಲ್‌ನಲ್ಲಿ ಸಂಚಾರ ಸಾಥಿ ಆ್ಯಪ್‌ ಇನ್‌ಸ್ಟಾಲ್‌: ವಿವಾದ ಬೆನ್ನಲ್ಲೇ ಯೂಟರ್ನ್‌ ಹೊಡೆದ ಕೇಂದ್ರ ಸರ್ಕಾರ

ಸೂರಜ್‌ ಬೆನ್ನಲ್ಲೇ ಪ್ರಜ್ವಲ್ ರೇವಣ್ಣಗೂ ಬಿಗ್‌ಶಾಕ್: ಶಿಕ್ಷೆ ಅಮಾನತು ಕೋರಿ ಸಲ್ಲಿಸಿದ್ದ ಅರ್ಜಿ ವಜಾ

ರಷ್ಯಾ ಅಧ್ಯಕ್ಷ ಪುಟಿನ್ ಭೇಟಿಗೆ ಬಂದೋಬಸ್ತ್ ನಡುವೆ ದೆಹಲಿಯ ಎರಡು ಕಾಲೇಜಿಗೆ ಬಾಂಬ್ ಬೆದರಿಕೆ

ಮುಂದಿನ ಸುದ್ದಿ
Show comments