ಶೀರೂರು ಸ್ವಾಮೀಜಿ ಸಾವು ಪ್ರಕರಣ: ಟ್ವಿಸ್ಟ್ ಮೇಲೆ ಟ್ವಿಸ್ಟ್ – ಆಡಿಯೋ ತುಣುಕು ಬಹಿರಂಗ

Webdunia
ಭಾನುವಾರ, 22 ಜುಲೈ 2018 (15:47 IST)
ಶೀರೂರು ಶ್ರೀಗಳ ಅಸಹಜ ಸಾವು ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಾ ಇದೆಶೀರೂರು ಆಡಿಯೋ ನಿಗೂಢವಾಗಿ ಸಾವನ್ನಪ್ಪಿದ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾ ಮಿಗಳು, ಸಾವಿಗೂ ನಾಲ್ಕು ದಿನಗಳ ಮುನ್ನ ಮಾತನಾಡಿದ್ದರು ಎನ್ನಲಾದ ಆಡಿಯೋ ತುಣುಕುಗಳು ಇದೀಗ ಒಂದೊಂದಾಗಿ ಬಿಡುಗಡೆ ಕಾಣುತ್ತಿವೆ.

ಇದೀಗ ಹೊಸದಾಗಿ ಬಿಡುಗಡೆಯಾದ ಆಡಿಯೋದಲ್ಲಿ ಶೀರೂರು ಶ್ರೀಗಳು, ಕೃ ಷ್ಣಾಪುರ ಮಠದ ಹಿರಿಯ ಯತಿಗಳಿಗೆ ಆರು ಹೆಣ್ಣುಮಕ್ಕಳಿದ್ದರು. ನಾನು ತಪ್ಪು ಮಾಡಿದ್ದು ನಿಜ. ಆದರೆ ಇವರೆಲ್ಲ ಮಾಡಿರುವ ತಪ್ಪುಗಳ ಮುಂದೆ ನನ್ನದು ಏನೇನೂ ಅಲ್ಲ. ಅಷ್ಟಮಠಗಳಲ್ಲಿ ಸೆಕ್ಸ್ ಎಂಬುದು ಹಿಂದೆಯೂ ಇತ್ತು, ಈಗಲೂ ಇದೆ, ಇನ್ನು ಮುಂದೆ ಕೂಡ ಇರುತ್ತದೆ ಎಂದು ಹೇಳುತ್ತಿರುವುದು ಕೇಳಿಬಂದಿದೆಪುತ್ತಿಗೆ ಮಠದ ಶತಾಯುಷಿ ಸುಧೀದ್ರ ತೀರ್ಥರಿಗೆ ಅಕ್ಕಯ್ಯ ಎಂಬ ಮಹಿಳೆ ಜತೆ ಸಂಬಂಧವಿತ್ತು. ತನ್ನ ಮಗನಿಗೇ ಅವರು ದೀಕ್ಷೆಯನ್ನು ಕೂಡಾ ಕೊಟ್ಟಿದ್ದರು. ಇದರ ವಿರುದ್ಧ ಏಳು ಸ್ವಾಮೀಜಿಗಳು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ವಿಚಾರದಲ್ಲಿ ಸುದೀಂದ್ರರ ತೀರ್ಥರಿಗೇ ಜಯ ಸಿಕ್ಕಿತ್ತು. ಅವರ ಮಗ ಪರ್ಯಾಯವನ್ನೂ ಕೂಡಾ ಪೂರೈಸಿದರು. ಅವರು ವಿಧಿವಶರಾಗಿ ಅವರ ವೃಂದಾವನ ಈಗಲೂ ಉಡುಪಿಯಲ್ಲಿದೆ.

ಅಷ್ಟಮಠಗಳ ಇತರ ಯತಿಗಳು ತಮ್ಮ ವಿರುದ್ಧ ಸಂಚು ಹೂಡಿದ್ದರು ಮತ್ತು ಇದಕ್ಕಾಗಿ ಖಾಸಗಿ ಸುದ್ದಿವಾಹಿನಿಗಳಿಗೆ ಹಣಕೊಟ್ಟು ನನ್ನ ವಿರುದ್ಧ ಪಿತೂರಿ ನಡೆಸಿದ್ದರು ಎಂದು ಆಡಿಯೋದಲ್ಲಿ ಶಿರೂರು ಶ್ರೀ ಆರೋಪಿಸಿದ್ದಾರೆ. ಅಲ್ಲದೆ ಹಿಂದೆಯೂ ಮಠದ ಕೆಲವು ಸ್ವಾಮಿಜಿಗಳನ್ನು ಜೀವಂತ ಶವ ಮಾಡಲಾಗಿತ್ತು. ಈಗ ನನ್ನನ್ನು ಮುಗಿಸಲು ಹೊರಟಿದ್ದಾರೆ ಎಂದು ದೂರಿದ್ದಾರೆ. ಅಜ್ಜ ತಮಿಳುನಾಡಿನಲ್ಲಿ ಮಹಿಳೆ ಜತೆ ಸಂಬಂಧ ಹೊಂದಿದ್ದು ಅವರಿಗೂ ಮೂವರು ಮಕ್ಕಳಿದ್ದಾರೆ. ಒಬ್ಬರು ಡಾ.ಉಷಾ ಅಂತ. ಚೆನ್ನೈನಲ್ಲಿ ವೈದ್ಯರಾಗಿದ್ದಾರೆನಿಮ್ಮ ತಂಟೆಗೆ ಬಂದರೆ ನಿಮಗೆ ಬೆಂಬಲ ನೀಡಲಿಕ್ಕೆ ನಿಮ್ಮ ಜೊತೆ ಬರುತ್ತೇವೆ ಎಂದು ಅವರು ಹೇಳಿದ್ದರು. ಅಲ್ಲದೆ ಡಿಎನ್ ಪರೀಕ್ಷೆಗೂ ಸಿದ್ಧ ಎಂದು ಉಷಾ ಹೇಳಿದ್ದರು ಎಂದು ಆಡಿಯೊದಲ್ಲಿ ಕೇಳಿಬಂದಿದೆ. ಒಟ್ಟಾರೆಯಾಗಿ ಶಿರೂರು ಸಾವಿನ ಪ್ರಕರಣ ಅಷ್ಟ ಮಠಾಧೀಶರ ಅನೈತಿಕ ಸಂಬಂಧಗಳನ್ನು ಜನರ ಮುಂದೆ ಸಂಪೂರ್ಣವಾಗಿ  ಬಿಚ್ಚಿಡಲು ಕಾರಣವಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಮ್ಮಪ್ಪನ ನಂತ್ರ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ನಾಯಕ: ಡಿಕೆಶಿ ಕನಸಿಗೆ ಕೊಳ್ಳಿಯಿಟ್ಟ ಯತೀಂದ್ರ ಸಿದ್ದರಾಮಯ್ಯ

ಗಣೇಶ ಹಬ್ಬದಲ್ಲಿ ಎಣ್ಣೆ ಹಾಕ್ಕೊಂಡು ಮಸೀದಿ ಮುಂದೆ ಡ್ಯಾನ್ಸ್ ಮಾಡೋದು ಯಾಕೆ: ಬಿಕೆ ಹರಿಪ್ರಸಾದ್ ವಿವಾದ

ರಾಯರಿದ್ದಾರೆ ಎಂದು ಮಂತ್ರಾಲಯದಲ್ಲಿ ಕೈ ಮುಗಿದ ಡಿಕೆ ಶಿವಕುಮಾರ್: ನೀವು ಸಿಎಂ ಆಗೇ ಆಗ್ತೀರಾ ಎಂದ ನೆಟ್ಟಿಗರು

ದಲಿತ ಸಂಘಟನೆಗಳಿಗೆ ನಂದೇ ಪ್ರಾಯೋಜಕತ್ವ ಏನಿವಾಗ ಎಂದ ಪ್ರಿಯಾಂಕ್ ಖರ್ಗೆ: ಇಲ್ಲಿದ್ರೆ ಸಸ್ಪೆಂಡ್ ಇಲ್ವಾ ಎಂದ ನೆಟ್ಟಿಗರು

Video: ದೀಪಾವಳಿ ಬೋನಸ್ ಬದಲು ಸೋನ್ ಪಾಪ್ಡಿ ಕೊಟ್ಟ ಬಾಸ್: ನೌಕರರು ಮಾಡಿದ್ದೇನು

ಮುಂದಿನ ಸುದ್ದಿ
Show comments