Select Your Language

Notifications

webdunia
webdunia
webdunia
webdunia

ರಾಜ್ಯದ ಸಂಸದರಿಗೆ ಸಚಿವ ಡಿಕೆಶಿ ಕೊಟ್ಟ ಐಫೋನ್ ವಿವಾದಕ್ಕೆ ಟ್ವಿಸ್ಟ್

ರಾಜ್ಯದ ಸಂಸದರಿಗೆ ಸಚಿವ ಡಿಕೆಶಿ ಕೊಟ್ಟ ಐಫೋನ್ ವಿವಾದಕ್ಕೆ ಟ್ವಿಸ್ಟ್
ಬೆಂಗಳೂರು , ಗುರುವಾರ, 19 ಜುಲೈ 2018 (09:36 IST)
ಬೆಂಗಳೂರು: ಸಿಎಂ ಕುಮಾರಸ್ವಾಮಿ ಕರೆದಿದ್ದ ಸರ್ವಪಕ್ಷಗಳ ಸಂಸದರ ಸಭೆಗೆ ಆಗಮಿಸುವ ಸಂಸದರಿಗೆ ಸಚಿವ ಡಿಕೆ ಶಿವಕುಮಾರ್ ಕೊಟ್ಟಿದ್ದಾರೆನ್ನಲಾದ ದುಬಾರಿ ಬೆಲೆಯ ಐಫೋನ್ ಗಿಫ್ಟ್ ವಿವಾದ ಈಗ ಮತ್ತೊಂದು ಹಂತಕ್ಕೆ ತಲುಪಿದೆ.

ಗಿಫ್ಟ್ ವಿವಾದದ ಬಗ್ಗೆ ಇದೀಗ ಕಾಂಗ್ರೆಸ್ ಹೈಕಮಾಂಡ್ ವರದಿ ಕೇಳಿದೆ. ಐಫೋನ್ ನೀಡಿದ್ದು ಭಾರೀ ಸುದ್ದಿಯಾಗುತ್ತಿದ್ದಂತೆ ಕಾಂಗ್ರೆಸ್ ಹೈಕಮಾಂಡ್ ಎಚ್ಚೆತ್ತುಕೊಂಡಿದೆ.

ಅತ್ತ ಬಿಜೆಪಿ ಸಂಸದರು ಗಿಫ್ಟ್ ಸ್ವೀಕರಿಸದೇ ಇರಲು ತೀರ್ಮಾನಿಸಿದ್ದಾರೆ. ಆದರೆ ಡಿಕೆಶಿ ಕ್ರಮವನ್ನು ಹಿರಿಯ ಶಾಸಕ ಶ್ಯಾಮನೂರ್ ಶಿವಶಂಕರಪ್ಪ ಮುಂತಾದವರು ಸಮರ್ಥಿಸಿಕೊಂಡಿದ್ದಾರೆ. ಆದರೆ ಪ್ರಕರಣ ಕುರಿತು ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ಮುಜುಗರ ಎದುರಿಸುತ್ತಿದ್ದಂತೆ ರಾಹುಲ್ ಗಾಂಧಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಮೂಲಕ ವರದಿ  ಪಡೆಯಲು ಸೂಚಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಶೀರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿ ವಿಧಿವಶ