Select Your Language

Notifications

webdunia
webdunia
webdunia
webdunia

ಶೀರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿ ವಿಧಿವಶ

ಶೀರೂರು ಮಠದ  ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿ ವಿಧಿವಶ
ಉಡುಪಿ , ಗುರುವಾರ, 19 ಜುಲೈ 2018 (09:09 IST)
ಉಡುಪಿ: ಅಷ್ಟ ಮಠಗಳಲ್ಲಿ ಒಂದಾದ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರು ವಿಧಿವಶರಾಗಿದ್ದಾರೆ. ಉಡುಪಿಯ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸ್ವಾಮೀಜಿ ಅವರು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ನಿಧನರಪ್ಪಿದ್ದಾರೆ.

ಶೀರೂರು ಶ್ರೀಗಳ ಮೂಲ ನಾಮಮೂಲ ನಾಮ ಹರೀಶ್ ಆಚಾರ್ಯ. ವಿಠ್ಹಲ ಆಚಾರ್ಯ, ಕುಸುಮಾ ಆಚಾರ್ಯ ದಂಪತಿಯ ಪುತ್ರ. ಹೆಬ್ರಿ ತಾಲೂಕಿನ ಮಡಮಕ್ಕಿ ಶ್ರೀಗಳ ಮೂಲ ಮನೆಯಾಗಿತ್ತು. ಶ್ರೀಗಳು ಶಿರೂರು ಮಠದ 30ನೇ ಯತಿಗಳಾಗಿದ್ದರು. ಇವರು ಮೂರು ಪರ್ಯಾಯವನ್ನು ಪೂರೈಸಿದ್ದರು.

ಶೀರೂರು ಶ್ರೀಗಳು ಸಂಗೀತ ಪ್ರೇಮಿ ಕೂಡ ಹೌದು.ತಮ್ಮ ಹುಟ್ಟುಹಬ್ಬದದು ಖ್ಯಾತ ಡ್ರಮ್ಮರ್ ಶಿವಮಣಿ ಜತೆ ಸೇರಿ ಡ್ರಮ್ಸ್ ಬಾರಿಸಿದ್ದರು. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದರು.ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದರು
ಕೊನೆ ಕ್ಷಣದಲ್ಲಿ ಚುನಾವಣಾ ಅಖಾಡದಿಂದ ಹಿಂದೆ ಸರಿದಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯಸಭೆಯಲ್ಲಿ ಕನ್ನಡ ಸೇರಿ 10 ಭಾಷಗಳಲ್ಲಿ ಮಾತನಾಡಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು