ರಾಜ್ಯದಲ್ಲಿ ಕೋವಿಡ್-19 ಸೋಂಕು ಉಲ್ಬಣವಾಗುತ್ತಿರುವ ಹಿನ್ನಲೆಯಲ್ಲಿ ಸೋಂಕಿತರ ತಪಾಸಣೆಗೆ ನೀಡಿರುವ ನಿರ್ಧಿಷ್ಟ ಗುರಿಯನ್ನು ಪ್ರತಿದಿನ ಪೂರ್ಣಗೊಳಿಬೇಕು.
ಹೀಗಂತ ಜಿಲ್ಲಾಧಿಕಾರಿಗಳಿಗೆ ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್ ನಿರ್ದೇಶಿಸಿದ್ದಾರೆ.
ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಕೋವಿಡ್-19 ಕುರಿತು ಇಂದು ವೀಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ಕೊರೋನಾ ಗುಣಲಕ್ಷಣಗಳಿರುವ ಎಲ್ಲರನ್ನೂ ಕಡ್ಡಾಯವಾಗಿ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಗೆ ಒಳಪಡಿಸಿ ಶೀಘ್ರವಾಗಿ ಸೋಂಕಿತರನ್ನು ಪತ್ತೆಮಾಡಬೇಕು ಎಂದರು.
ಕೋವಿಡ್-19 ಗಂಟಲ ದ್ರವ ಪರೀಕ್ಷೆ ಪ್ರಯೋಗಾಲಯಗಳಲ್ಲಿ ಪರೀಕ್ಷಾ ವರದಿ ಮತ್ತು ಅಂಕಿ ಅಂಶ ವರದಿ ತಡವಾಗುತ್ತಿದ್ದು, ಅವಶ್ಯಕವಿರುವ ಸಿಬ್ಬಂದಿಗಳನ್ನು ನೇಮಿಸಿ ಮೂರು ಶಿಫ್ಟ್‍ನಲ್ಲಿ ಕೆಲಸ ಮಾಡುವಂತೆ ಕ್ರಮವಹಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಟಿ.ಎಂ. ವಿಜಯ್ ಭಾಸ್ಕರ್ ಅವರು ಸೂಚಿಸಿದ್ದಾರೆ.