Publish Date: Wed, 03 Jul 2019 (19:52 IST)
Updated Date: Wed, 03 Jul 2019 (19:54 IST)
ಗಾಂಜಾ ನಶೆಯಲ್ಲಿದ್ದ ವಿದ್ಯಾರ್ಥಿನಿ ಮೇಲೆ ನಾಲ್ವರು ಯುವಕರು ಸರಣಿ ಅತ್ಯಾಚಾರ ಮಾಡಿರುವ ಘಟನೆ ನಡೆದಿದೆ.
ಮಂಗಳೂರಿನ ಪುತ್ತೂರಿನಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗುವ ಮೂಲ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪುತ್ತೂರಿನ ಕಾಲೇಜೊಂದರ ವಿದ್ಯಾರ್ಥಿನಿಯೊಬ್ಬಳ ಮೇಲೆ ಅದೇ ಕಾಲೇಜಿನ ನಾಲ್ಕು ವಿದ್ಯಾರ್ಥಿಗಳು ಸರಣಿ ಅತ್ಯಾಚಾರ ಮಾಡಿದ್ದಾರೆ.
ನಗ್ನ ವಿಡಿಯೋ, ಅತ್ಯಾಚಾರ ಮಾಡುವ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಯುವತಿಯೂ ಗಾಂಜಾ ನಶೆಯಲ್ಲಿದ್ದಳು. ಆಗ ಅವಳ ಮೇಲೆ ನಾಲ್ವರು ಒಬ್ಬರಾದ ಮೇಲೆ ಒಬ್ಬರು ತಮ್ಮ ಕಾಮತೃಷೆ ತೀರಿಸಿಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮೂವರು ವಿದ್ಯಾರ್ಥಿಗಳನ್ನು ಬಂಧನ ಮಾಡಲಾಗಿದೆ. ಮತ್ತೊಬ್ಬ ತಲೆಮರೆಸಿಕೊಂಡಿದ್ದಾನೆ. ಆದರೆ ವಿದ್ಯಾರ್ಥಿನಿ ಈ ವರೆಗೂ ದೂರು ನೀಡಿಲ್ಲ.