Publish Date: Tue, 02 Jul 2019 (19:40 IST)
Updated Date: Tue, 02 Jul 2019 (19:45 IST)
ಕಾಮಕ್ಕೆ ಕಣ್ಣಿಲ್ಲ ಅಂತ ಹಿರಿಯರು ಹೇಳಿರೋದು ಸತ್ಯ. ಹಾಗಂತ ಹುಚ್ಚು ಕುದುರೆಗೆ ಲಗಾಮು ಇಲ್ಲದಂತಾಗಬಾರದು. 70 ವೃದ್ಧನೊಬ್ಬ 7 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಕೆಲವು ವ್ಯಕ್ತಿಗಳು ನಡೆದುಕೊಳ್ಳುವ ಹೇಸಿಗೆಯಂತಹ ಕೃತ್ಯಗಳಿಗೆ ಇಡೀ ಗಂಡಸಿನ ಜಾತಿ ಬೆಚ್ಚಿ ಬೀಳುವಂತೆ ಮಾಡುತ್ತಿದೆ. ಪುಟ್ಟ ಬಾಲಕಿಯೊಬ್ಬಳ ಮೇಲೆ ವೃದ್ಧನೊಬ್ಬ ಅತ್ಯಾಚಾರ ಮಾಡುತ್ತಿದ್ದಾನೆ. ಆದರೆ ಈ ವಿಷಯ ತಿಳಿದ ವ್ಯಕ್ತಿಯೊಬ್ಬ ಅದನ್ನು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.
ಹಿಂದಿಯಲ್ಲಿ ಮಾತನಾಡಿರುವ ವಿಡಿಯೋ ಇದಾಗಿದ್ದು, ಆದ್ರೆ ಈ ವೀಡೀಯೋ ಮಾತ್ರ ಎಲ್ಲಿಯದು ಅಂತ ಗೊತ್ತಿಲ್ಲ. ಆದ್ರೆ ಸಾರ್ವಜನಿಕ ಜಾಲತಾಣಗಳಲ್ಲಿ ಮಾತ್ರ ವೈರಲ್ ಆಗಿದೆ. ಇಂತಹ ಮುಗ್ಧ ಮಕ್ಕಳ ಮೇಲೆ ನಡೆಯುವಂತಹ ಅಮಾನವೀಯ ಕೃತ್ಯಗಳಿಗೆ ಹೆತ್ತ ತಂದೆ- ತಾಯಿಯೆ ಕಾರಣವಾಗ್ತಿದ್ದಾರೆ. ಯಾಕಂದ್ರೆ ಜವಾಬ್ದಾರಿ ಅನ್ನೋದು ಎಲ್ಲರಲ್ಲೂ ಇರಬೇಕಾದಂತಹ ದೊಡ್ಡ ಆಸ್ತಿ.
ಅದನ್ನ ಮರೆತು ನನ್ನದು, ನನ್ನ ಮಕ್ಕಳು ಅನ್ನುವ ಜವಾಬ್ದಾರಿಯನ್ನ ಮರೆತರೆ, ಇಂತಹ ಹೇಯ ಕೃತ್ಯಗಳಿಗೆ ನಾವೇ ಕಾರಣವಾಗ ಬೇಕಾಗುತ್ತದೆ. ಮಕ್ಕಳನ್ನ ಹೆತ್ತರಷ್ಟೇ ಮುಖ್ಯವಲ್ಲ. ಅವರನ್ನ ಜೋಪಾನ ಮಾಡುವುದು ಅಷ್ಟೆ ಅತ್ಯಮೂಲ್ಯ. ಇಂತಹ ಕೃತ್ಯಗಳನ್ನ ಎಸಗುವ ಮನುಷ್ಯರಿಗೆ ಕಠಿಣ ಶಿಕ್ಷೆ ಆಗಬೇಕೆಂದು ಜನರು ಆಗ್ರಹ ಮಾಡುತ್ತಿದ್ದಾರೆ.