Select Your Language

Notifications

webdunia
webdunia
webdunia
webdunia

ಮಾದಕ ವಸ್ತು ಗಾಂಜಾ, ಅಂಬರ್‍ಗ್ರೀಸ್ ಮಾರಾಟ

ಮಾದಕ ವಸ್ತು ಗಾಂಜಾ, ಅಂಬರ್‍ಗ್ರೀಸ್ ಮಾರಾಟ
bangalore , ಭಾನುವಾರ, 22 ಆಗಸ್ಟ್ 2021 (20:39 IST)
ಮಾದಕ ವಸ್ತು ಗಾಂಜಾ, ಅಂಬರ್‍ಗ್ರೀಸ್ ಮಾರಾಟ, ನಕಲಿ ನೋಟುಗಳ ಮಾರಾಟ, ಕನ್ನ ಕಳವು ಸೇರಿ 36 ಪ್ರಕರಣಗಳಲ್ಲಿ  14 ಮಂದಿ ಬಂಧಿಸಿರುವ ಆಗ್ನೇಯ ವಿಭಾಗದ ಪೆÇಲೀಸರು, ಅವರಿಂದ 7.81 ಕೋಟಿ ರೂ. ಮೌಲ್ಯದ ದ್ವಿಚಕ್ರ ವಾಹನಗಳು, ಮಾದಕ ವಸ್ತು, ಚಿನ್ನಾಭರಣ, ಅಂಬರ್ ಗ್ರೀಸ್, ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವ್ ಜೋಶಿ ತಿಳಿಸಿದರು. 
ನಕಲಿ ನೋಟು ಮಾರಾಟ:
ಸಾಲ ಕೊಡುವುದಾಗಿ ಜಾಹಿರಾತು ನೀಡಿ ಮಕ್ಕಳು ಬಳಸುವ ನೋಟುಗಳನ್ನು ಕೊಟ್ಟು ವಂಚಿಸುತ್ತಿದ್ದ ಕೇರಳ ಮತ್ತು ತಮಿಳುನಾಡು ಮೂಲದ ಮೂವರು ಆರೋಪಿಗಳನ್ನು ಬೇಗೂರು ಪೆÇಲೀಸರು ಬಂಧಿಸಿದ್ದಾರೆ.
ಕೇರಳ ಸುರೇಶ್ ಮತ್ತು ತಮಿಳುನಾಡಿನ ಕೊಯಮತ್ತೂರು ಮೂಲದ  ಮನೋಜ್, ಅನ್ಪುಕುಮಾರ್ ಬಂಧಿತರು. ಆರೋಪಿಗಳು ಈ ಹಿಂದೆ ಆಟೋ, ಟ್ಯಾಕ್ಸಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಲಾಕ್‍ಡೌನ್ ಸಂದರ್ಭದಲ್ಲಿ  ಹಣಕ್ಕಾಗಿ ದಂಧೆಗೆ ಇಳಿದಿದ್ದಾರೆ. ಭಿತ್ತಿಪತ್ರಗಳ ಮೂಲಕ ಸಾಲ ಕೊಡುವುದಾಗಿ ಜಾಹಿರಾತು ನೀಡುತ್ತಿದ್ದರು. ಅವರನ್ನು ಸಂಪರ್ಕಿಸುತ್ತಿದ್ದ ಗ್ರಾಹಕರ ಬೇಡಿಕೆಗೆ ತಕ್ಕಂತೆ ಹತ್ತು ಸಾವಿರದಿಂದ ಒಂದು ಲಕ್ಷ ರೂ.ವರೆಗೆ ಕಮಿಷನ್ ಪಡೆಯುತ್ತಿದ್ದರು. ಕೆಲ ದಿನಗಳ ಬಳಿಕ ಗ್ರಾಹಕರಿಗೆ ಸೂಟ್‍ಕೇಸ್‍ನಲ್ಲಿ ಮೇಲೆ ಮತ್ತು ಕೆಳಭಾಗದಲ್ಲಿ 500 ಮತ್ತು ಎರಡು ಸಾವಿರ ಮುಖ ಬೆಲೆಯ ಅಸಲಿ ನೋಟುಗಳನ್ನು ಇಟ್ಟು ಮಧ್ಯದಲ್ಲಿ ಮಕ್ಕಳು ಆಟಿಕೆಗೆ ಬಳಸುವ ನಕಲಿ ನೋಟುಗಳನ್ನು ಸೇರಿಸುತ್ತಿದ್ದರು. ಬಳಿಕ ಪ್ರತಿ ಬಂಡಲ್‍ಗೆ ಪ್ಲಾಸ್ಟಿಕ್ ಕವರ್‍ನಿಂದ ಸುತ್ತುತ್ತಿದ್ದರು. ಹೀಗಾಗಿ ನಕಲಿ ನೊಟುಗಳ ಪತ್ತೆ ಸಾಧ್ಯವಾಗುತ್ತಿರಲಿಲ್ಲ. ಆರೋಪಿಗಳು ಆ.12ರಂದು ಬೇಗೂರು ಠಾಣಾ ವ್ಯಾಪ್ತಿಯ ಅಂಗಾಳ ಪರಮೇಶ್ವರಿ ದೇವಾಲಯದ ಸಮೀಪದಲ್ಲಿ ನಕಲಿ ನೋಟುಗಳನ್ನು ಇಟ್ಟುಕೊಂಡು ಗ್ರಾಹಕರೊಬ್ಬರಿಗೆ ಕೊಡಲು ಸಿದ್ದತೆ ನಡೆಸಿದ್ದರು. ಈ ಮಾಹಿತಿ ಮೇರೆಗೆ ಇನ್ಸ್‍ಪೆಕ್ಟರ್ ಶಿವಕುಮಾರ್ ಬಮುಚ್ಚಂಡಿ, ಪಿಎಸ್‍ಐ ಬಿ.ಜೆ. ಸವಿನಯ, ಮಂಜುನಾಥ್ ನೇತೃತ್ವದ  ತಂಡ ದಾಳಿ  ನಡೆಸಿ ಬಂಧಿಸಿದೆ. ಅವರಿಂದ 33 ಲಕ್ಷ ರೂ. ಮೌಲ್ಯದ 500 ಮತ್ತು 2000 ಮುಖಬೆಲೆಯ ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೆÇಲೀಸರು ಹೇಳಿದರು.
ಮತ್ತೊಂದು ಪ್ರಕರಣದಲ್ಲಿ ಮನೆ ಮುಂದೆ ನಿಂತಿದ್ದ ದ್ವಿಚಕ್ರ ವಾಹನ ಕಳವು ಮಾಡಿ ಗ್ರಾಮಾಂತರ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬೇಗೂರು ಪೆÇಲೀಸರು ಬಂಧಿಸಿದ್ದಾರೆ. ಆತನಿಂದ 19 ಲಕ್ಷ ರೂ. ಮೌಲ್ಯದ 14 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಈತನ ವಿರುದ್ಧ ಬನಶಂಕರಿ, ಜೆ.ಪಿ.ನಗರ, ಕೆ.ಎಸ್.ಲೇಔಟ್, ಪುಟ್ಟೇನಹಳ್ಳಿ, ಹುಳಿಮಾವು, ಗಿರಿನಗರ, ಕೋಣನಕುಂಟೆ, ಮೈಕೋ ಲೇಔಟ್ ಹಾಗೂ ಬೇಗೂರು ಠಾಣೆ ವ್ಯಾಪ್ತಿಗಳಲ್ಲಿ 14 ದ್ವಿಚಕ್ರ ವಾಹನಗಳನ್ನು ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು  ಪೆÇಲೀಸರು ಹೇಳಿದರು.
ಹುಳಿಮಾವು ಠಾಣೆ:  ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಅಂತರಾಜ್ಯ ಆರೋಪಿಯನ್ನು ಹುಳಿಮಾವು ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 61.50 ಲಕ್ಷ ರೂ. ಮೌಲ್ಯದ 102.5 ಕೆ.ಜಿ.ತೂಕದ ಗಾಂಜಾ ವಶಕ್ಕೆ ಪಡೆಯಲಾಗಿದೆ. ನೆರೆ ರಾಜ್ಯಗಳಿಂದ ಗಾಂಜಾ ತಂದು ಬೆಂಗಳೂರಿನ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಎಂದು ಪೆÇಲೀಸರು ಹೇಳಿದರು.
ಪರಪ್ಪನ ಅಗ್ರಹಾರ:
ಎರಡು ಪ್ರತ್ಯೇಕ ಪ್ರಕರಣಗ ಳಲ್ಲಿ ಅಂಬರ್‍ಗ್ರೀಸ್ ಮತ್ತು ಅಫೀಮು ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಪೆÇಲೀಸರು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳು ಕರಾವಳಿ ಭಾಗದಲ್ಲಿ ಕಳ್ಳ ಮಾರ್ಗದ ಮೂಲಕ ದೊರೆಯುವ ಅಂಬರ್‍ಗ್ರೀಸ್ ಅನ್ನು ಖರೀದಿಸಿ ನಗರದ ಮಧ್ಯವರ್ತಿಯೊಬ್ಬನ ಮೂಲಕ ವಿದೇಶಕ್ಕೆ ಸಾಗಾಟಕ್ಕೆ ಮುಂದಾಗಿದ್ದರು. ಈ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದೆ. ಆರೋಪಿಗಳಿಂದ ಐದು ಕೋಟಿ ರೂ. ಮೌಲ್ಯದ ಐದು ಕೆ.ಜಿ. ಅಂಬರ್‍ಗ್ರೀಸ್ ವಶಕ್ಕೆ ಪಡೆಯಲಾಗಿದೆ ಎಂದು ಪೆÇಲೀಸರು ಹೇಳಿದರು. ಇನ್ನು ರಾಜಸ್ಥಾನದಿಂದ ಅಫೀಮು ತಂದು ಮಾರಾಟಕ್ಕೆ ಮುಂದಾಗಿದ್ದ ಇಬ್ಬರು ಆರೋಪಿಗನ್ನು ಬಂಧಿಸಲಾಗಿದೆ. ಅವರಿಂದ  20 ಲಕ್ಷ ರೂ. ಮೌಲ್ಯದ ಒಂದು ಕೆ.ಜಿ. ಅಫೀಮು ವಶಕ್ಕೆ ಪಡೆಯಲಾಗಿದೆ ಎಂದು ಪೆÇಲೀಸರು ಮಾಹಿತಿ ನೀಡಿದರು.
ಎಲೆಕ್ಟ್ರಾನಿಕ್ ಸಿಟಿ ಠಾಣೆ:
ರಾಜಸ್ಥಾನದಿಂದ ಮಾದಕ ವಸ್ತು ಅಫೀಮು ತಂದು ನಗರದಲ್ಲಿ ಮಾರಾಟದಲ್ಲಿ ತೊಡಗಿದ್ದ ಆರೋಪಿಯನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 25 ಲಕ್ಷ ರೂ. ಮೌಲ್ಯದ 1 ಕೆ.ಜಿ 250 ಗ್ರಾಂ ತೂಕದ ಅಫೀಮು ಮತ್ತು ಒಂದು ಹೋಂಡಾ ಶೈನ್ ದ್ವಿಚಕ್ರ ವಾಹನ, ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಸುದ್ದಗುಂಟೆಪಾಳ್ಯ, ಮೈಕೋ ಲೇಔಟ್ ಠಾಣೆ:
ಕನ್ನ ಕಳವು ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸುದ್ದಗುಂಟೆ ಪಾಳ್ಯ ಮತ್ತು ಮೈಕೋ ಲೇಔಟ್ ಪೆÇಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕನ್ನಗಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸುದ್ದಗುಂಟೆ ಪಾಳ್ಯ ಠಾಣೆ ಪೆÇಲೀಸರು ಬಂಧಿಸಿ 35 ಲಕ್ಷ ರೂ. ಮೌಲ್ಯದ 702 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿz್ದÁರೆ. ಮನೆ ಕನ್ನಕಳವು ಮಾಡುತ್ತಿದ್ದ ಆರೋಪಿಯನ್ನು ಮೈಕೊ ಲೇಔಟ್ ಠಾಣೆ ಪೆÇಲೀಸರು ಬಂಧಿಸಿ 23 ಲಕ್ಷ ರೂ. ಮೌಲ್ಯದ 508 ಗ್ರಾಂ ಚಿನ್ನಾಭರಣ ಮತ್ತು 1.50 ಲಕ್ಷ ಮೌಲ್ಯದ 2 ಕೆ.ಜಿ.100 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಮೂವರು ಆರೋಪಿಗಳ ಬಂಧನದಿಂದ ನಗರದ ವಿವಿಧ ಪೆÇಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 16 ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೆÇಲೀಸರು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮಾರಕಾಸ್ತ್ರ ಗಳನ್ನು ಹಿಡಿದು ಸುಲಿಗೆ