Select Your Language

Notifications

webdunia
webdunia
webdunia
webdunia

ರಾಜ್ಯಕ್ಕೆ ಎರಡನೇ ಐಷಾರಾಮಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಸೇವೆ ಆರಂಭ

ರಾಜ್ಯಕ್ಕೆ ಎರಡನೇ ಐಷಾರಾಮಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಸೇವೆ ಆರಂಭ
bangalore , ಮಂಗಳವಾರ, 27 ಜೂನ್ 2023 (16:39 IST)
ಧಾರವಾಡ ಟು ಬೆಂಗಳೂರು ನಡುವೆ ಎರಡನೇ ವಂದೇ ಭಾರತ್ ರೈಲು ಸಂಚಾರಿಸಲಿದೆ.ಈ ರೈಲಿಗೆ ಇಂದು ಭೋಪಾಲ್‌ನಿಂದ ಚಾಲನೆ‌ ಸಿಗಲಿದೆ.ಇದು ಮೈಸೂರು- ಚೆನ್ನೈ ಬಳಿಕ 2ನೇ ಐಷಾರಾಮಿ ರೈಲಾಗಿದೆ.ರಾಜ್ಯಕ್ಕೆ ಎರಡನೇ ಐಷಾರಾಮಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸೇವೆ ಸಿಕ್ಕಂತಾಗಲಿದೆ. ಈಗಾಗಲೇ ಮೈಸೂರು-ಬೆಂಗಳೂರು- ಚೆನ್ನೈ ನಡುವೆ ಮೊದಲ ವಂದೇ ಭಾರತ್‌ ರೈಲು ಸಂಚಾರ ನಡೆಸುತ್ತಿದೆ.ವಂದೇಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳು ಗಂಟೆಗೆ ಗರಿಷ್ಠ 180 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿವೆ. ಇದಲ್ಲದೆ ಅತ್ಯುತ್ತಮ ಸೀಟುಗಳು, ಗುಣಮಟ್ಟದ ಆಹಾರ, ಶುಚಿತ್ವಕ್ಕೆ ಆದ್ಯತೆ, ಲಗೇಜ್‌ ಇಡಲು ಅನುಕೂಲಕರ ಸ್ಥಳ ಇದೆ.ಆದರೆ ಇತರೆ ರೈಲುಗಳಿಗೆ ಹೋಲಿಸಿದರೆ ಇವುಗಳ ಟಿಕೆಟ್‌ ದರ ಸಾಕಷ್ಟುದುಬಾರಿ ಇದೆ.ಬೆಂಗಳೂರು ರಾಜ್ಯದ ಬಹುನಿರೀಕ್ಷಿತ ಬೆಂಗಳೂರು-ಧಾರವಾಡ ವಂದೇ ಭಾರತ್‌ ರೈಲಿಗೆ ಇಂದು ಚಾಲನೆ ಸಿಗಲುದೆ.
 
ವಂದೇ ಭಾರತ್ ಎಕ್ಸ್‌ಪ್ರೆಸ್‌ ರೂಟ್ ನೋಡುವುದಾದರೆ
 
ಈ ರೈಲು (ರೈ.ಸಂ. 20661) ಬೆಳಗ್ಗೆ 5.45ಕ್ಕೆ ಕೆಎಸ್‌ಆರ್‌ ಬೆಂಗಳೂರು ನಿಲ್ದಾಣದಿಂದ ಹೊರಟು 5.57ಕ್ಕೆ ಯಶವಂತಪುರ, 9.17ಕ್ಕೆ ದಾವಣಗೆರೆ, 11.35ಕ್ಕೆ ಹುಬ್ಬಳ್ಳಿ ಹಾಗೂ ಮಧ್ಯಾಹ್ನ 12.10ಕ್ಕೆ ಧಾರವಾಡ ತಲುಪಲಿದೆ. ಹಿಂದಿರುಗುವಾಗ (ರೈ.ಸಂ. 20662) ಮಧ್ಯಾಹ್ನ 1.15ಕ್ಕೆ ಧಾರವಾಡ ಬಿಟ್ಟು 1.40ಕ್ಕೆ ಎಸ್‌ಎಸ್‌ಎಸ್‌ ಹುಬ್ಬಳ್ಳಿ, 3.38ಕ್ಕೆ ದಾವಣಗೆರೆ, 7.13ಕ್ಕೆ ಯಶವಂತಪುರ, 7.45ಕ್ಕೆ ಕೆಎಸ್‌ಆರ್‌ ಬೆಂಗಳೂರು ತಲುಪಲಿದೆ.
 
ಬೆಂಗಳೂರಿಂದ ಧಾರವಾಡಕ್ಕೆ ತಲುಪುವ ದರ ಹೇಳುವುದಾದರೆ
 
ಹುಬ್ಬಳ್ಳಿ-ಧಾರವಾಡ, ಬೆಂಗಳೂರು-ಯಶವಂತಪುರ 410 ರು. ದರವಾಗಿದೆ.ಎಸಿ ಚೇರ್‌ಕಾರ್‌ನಲ್ಲಿ ಬೆಂಗಳೂರಿಂದ ಯಶವಂತಪುರಕ್ಕೆ .410, ದಾವಣಗೆರೆಗೆ .915, ಹುಬ್ಬಳ್ಳಿಗೆ .1135, ಧಾರವಾಡಕ್ಕೆ .1165 ಇದೆ. ಯಶವಂತಪುರದಿಂದ ದಾವಣಗೆರೆಗೆ .900, ಹುಬ್ಬಳ್ಳಿ .1135, ಧಾರವಾಡ .1165, ದಾವಣಗೆರೆಯಿಂದ ಹುಬ್ಬಳ್ಳಿ .500, ಧಾರವಾಡ .535, ಹುಬ್ಬಳ್ಳಿಯಿಂದ ಧಾರವಾಡ .410 ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಹವಾಲು ಸ್ವೀಕರಿಸಿದ H.K.ಪಾಟೀಲ್