Select Your Language

Notifications

webdunia
webdunia
webdunia
webdunia

51 ಲಕ್ಷ ದಾಟಿದ ಗೃಹಜ್ಯೋತಿ ನೋಂದಣಿ

51 ಲಕ್ಷ ದಾಟಿದ ಗೃಹಜ್ಯೋತಿ ನೋಂದಣಿ
bangalore , ಮಂಗಳವಾರ, 27 ಜೂನ್ 2023 (13:52 IST)
ಜೂನ್ 18 ರಿಂದ ಆರಂಭವಾಗಿರುವ ಗೃಹಜ್ಯೋತಿ ನೊಂದಣಿಗೆ ರಾಜ್ಯದ ಜನರು ಭರ್ಜರಿಯಾಗಿ ಸ್ಪಂದಿಸಿದ್ದು,
ನಿನ್ನೆ ಸಂಜೆಯವರೆಗೆ 51,17,693 ಗ್ರಾಹಕರು ನೋಂದಣಿ ಮಾಡಿದ್ದಾರೆ. ಇ- ಆಡಳಿತ ಇಲಾಖೆ ರಾಜ್ಯದ 2,000 ವಿದ್ಯುತ್ ಕಚೇರಿಗಳಿಗೆ ಪ್ರತ್ಯೇಕ ನೋಂದಣಿ ಲಿಂಕ್​ನ್ನು ನೀಡಿದ ನಂತರದಲ್ಲಿ ನೋಂದಣಿಗೆ ವೇಗ ಸಿಕ್ಕಿದೆ.ಪ್ರತಿದಿನ ಗೃಹಜ್ಯೋತಿಗೆ ನೋಂದಣಿಗೆ ಲಕ್ಷಾಂತರ ಗ್ರಾಹಕರು ಅರ್ಜಿ ಸಲ್ಲಿಸುತ್ತಿದ್ದಾರೆ. ರಾಜ್ಯ ಸರ್ಕಾರ ಕೊಟ್ಟಿರೋ ಲಿಂಕ್‌ ಮೂಲಕವೇ ನೋಂದಣಿ ಮಾಡುವಂತೆ ಇಲಾಖೆ ಸೂಚಿಸಿದೆ. ನಿಗದಿತ ಸೇವಾ ಶುಲ್ಕಕ್ಕಿಂತ ಹೆಚ್ಚಿನ ಮೊತ್ತ ಬರಿಸಿದ್ದಲ್ಲಿ 1912ಕ್ಕೆ ಕರೆ ಮಾಡಿ ದೂರು ದಾಖಲಿಸಬಹುದೆಂದು ಇಲಾಖೆ ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಳೆಯಾಗಲೆಂದು ಹೂತಿದ್ದ ಶವಕ್ಕೆ ನೀರು ಹಾಕಿದ ಗ್ರಾಮಸ್ಥರು!