Publish Date: Tue, 27 Jun 2023 (15:00 IST)
Updated Date: Tue, 27 Jun 2023 (14:38 IST)
ಮೀನು ಹಿಡಿಯಲು ಹೋಗಿ ಯುವಕ ನೀರುಪಾಲಾಗಿರುವ ಘಟನೆ ಯಾದಗಿರಿ ನಗರದ ಹೊರಭಾಗದ ಭೀಮಾನದಿಯಲ್ಲಿ ನಡೆದಿದೆ. ನಗರದ ಹೊರಭಾಗದ ಗುರುಸಣಗಿ ಬ್ರಿಡ್ಜ್ ಕಂ ಬ್ಯಾರೇಜ್ ಹಿಂಭಾಗದಲ್ಲಿ ಘಟನೆ ನಡೆದಿದೆ. ದುಕಾನ್ ವಾಡಿ ನಿವಾಸಿ ಅಬ್ದುಲ್ ಸಾವನ್ನಪ್ಪಿದ್ದಾರೆ. ಸ್ನೇಹಿತರ ಜೊತೆ ಮೀನು ಹಿಡಿಯಲು ತೆರಳಿದ್ದ ವೇಳೆ ಕಾಲು ಜಾರಿ ಯುವಕ ನದಿಗೆ ಬಿದ್ದಿದ್ದಾನೆ. ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ನಗರ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿ ಮೃತ ಯುವಕನ ಶವ ಹೊರ ತೆಗೆದಿದ್ದಾರೆ.