Publish Date: Wed, 11 Jan 2023 (20:28 IST)
Updated Date: Wed, 11 Jan 2023 (20:34 IST)
ಸ್ಯಾಂಟ್ರೋ ರವಿಯ ಕ್ರೈಂ ಕಹಾನಿ ಬೆಚ್ಚಿ ಬೀಳಿಸುವಂತಿದೆ. 9 ದಿನವಾದ್ರೂ ಖತರ್ನಾಕ್ ಸ್ಯಾಂಟ್ರೋ ರವಿ ಪತ್ತೆಯಾಗಿಲ್ಲ.
ADGP ಅಲೋಕ್ ಕುಮಾರ್ ಮೈಸೂರು ಭೇಟಿ ಬಳಿಕ ಖಾಕಿ ಅಲರ್ಟ್ ಆಗಿದೆ. 11 ತಂಡಗಳ ಮೂಲಕ ಸ್ಯಾಂಟ್ರೋ ರವಿಗಾಗಿ ಹುಡುಕಾಟ ನಡೆಸಲಾಗ್ತಿದೆ. ಕೇರಳ, ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಆರೋಪಿಗಾಗಿ ಸರ್ಚಿಂಗ್ ಮಾಡಲಾಗ್ತಿದೆ. ಕೋರ್ಟ್ ಮೂಲಕ ಸ್ಯಾಂಟ್ರೋ ರವಿ ಶರಣಾಗುವ ಸಾಧ್ಯತೆ ಇದೆ. ಬೆಂಗಳೂರಿನ R.R.ನಗರದಲ್ಲಿರುವ ರವಿಯ ಮನೆ ಹಾಗೂ ರವಿ ಪತ್ನಿ ವನಜಾಕ್ಷಿಯ ಮನೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೈಸೂರಿನ ನರಸಿಂಹರಾಜ ಠಾಣೆಯ ಪೊಲೀಸರು ಸರ್ಚ್ ವಾರೆಂಟ್ನೊಂದಿಗೆ ಎಂಟ್ರಿ ಕೊಟ್ಟು ತನಿಖೆ ನಡೆಸುತ್ತಿದ್ದಾರೆ.