Select Your Language

Notifications

webdunia
webdunia
webdunia
webdunia

ಆದಾಯ ಮೀರಿ ಆಸ್ತಿಗಳಿಸಿದ ಅಧಿಕಾರಿಗಳ ಮನೆಯಲ್ಲಿ ಶೋಧ - ಮನೆಯಲ್ಲಿ ಸಿಕ್ಕಿದ್ದು ಏನು ಗೊತ್ತಾ?

ಆದಾಯ ಮೀರಿ ಆಸ್ತಿಗಳಿಸಿದ ಅಧಿಕಾರಿಗಳ ಮನೆಯಲ್ಲಿ ಶೋಧ - ಮನೆಯಲ್ಲಿ ಸಿಕ್ಕಿದ್ದು ಏನು ಗೊತ್ತಾ?
bangalore , ಗುರುವಾರ, 25 ನವೆಂಬರ್ 2021 (20:23 IST)
ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇಲೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ 15 ಅಧಿಕಾರಿಗಳ ಮನೆ, ಕಚೇರಿ ಹಾಗೂ ಅವರ ನಿಕಟವರ್ತಿಗಳ ಮನೆಗಳ ಮೇಲೆ ಬೆಳಿಗ್ಗೆಯೇ ದಾಳಿ ಮಾಡಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶೋಧ ನಡೆಸುತ್ತಿದೆ.
ಬೆಂಗಳೂರು, ಬಳ್ಳಾರಿ, ಮಂಗಳೂರು, ಬೆಳಗಾವಿ, ಗದಗ ಸೇರಿ ವಿವಿಧ ಜಿಲ್ಲೆಯ 68 ಕಡೆ 400 ಕ್ಕೂ ಅಧಿಕ ಎಸಿಬಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಏಕಕಾಲದಲ್ಲಿ ದಾಳಿ ನಡೆಸಿದರು.
ಆರೋಪಿತ ಸರ್ಕಾರಿ ಅಧಿಕಾರಿಗಳು, ನೌಕರರ ಮನೆಗಳು ಮತ್ತು ಅವರ ನಿಕಟವರ್ತಿಗಳ ಮನೆಗಳಲ್ಲಿ ಸ್ಥಿರಾಸ್ತಿ ಒಡೆತನದ ದಾಖಲೆಗಳು, ಬ್ಯಾಂಕ್‌ ವಹಿವಾಟಿಗೆ ಸಂಬಂಧಿಸಿದ ದಾಖಲೆಗಳು, ಚಿನ್ನಾಭರಣ, ವಾಹನಗಳ ವಿವರಗಳನ್ನು ಸಂಗ್ರಹಿಸುವ ಕೆಲಸ ಮುಂದುವರಿದಿದೆ.
ಗದಗ ಜಿಲ್ಲೆಯ ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ಮನೆಯಲ್ಲಿ 3.5 ಕೋಟಿ ರೂ. ಮೌಲ್ಯದ 7 ಕೆಜಿ ಚಿನ್ನ, ಎರಡು ಲಕ್ಷ ರೂ. ಮೌಲ್ಯದ ಮೂರು ಕೆ.ಜಿ ಬೆಳ್ಳಿ ಮತ್ತು 15 ಲಕ್ಷ ರೂ. ನಗದನ್ನು ಎಸಿಬಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ವಜ್ರಾಭರಣದ ಮೌಲ್ಯಮಾಪನ ನಡೆಯುತ್ತಿದೆ.
ಇನ್ನುಎಲ್‌.ಸಿ. ನಾಗರಾಜ್ ನಿವಾಸದಲ್ಲಿ 43 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ವಿಚಿತ್ರ ಎಂಬಂತೆ ಮನೆಯಲ್ಲಿ ಇಟ್ಟಿದ್ದ ಸೀರೆ ಸೀರೆಯಲ್ಲೂ ಹಣ ಪತ್ತೆ ಆಗಿದೆ. 
ಪಿಡಬ್ಲ್ಯುಡಿ ಜೆಇ ಶಾಂತಗೌಡ ಮನೆಯಲ್ಲಿ 55 ಲಕ್ಷಕ್ಕೂ ಹೆಚ್ಚು ಹಣ ಪತ್ತೆ ಆಗಿದೆ. ಕಲಬುರಗಿಯ ಗುಬ್ಬಿ ಕಾಲೋನಿಯ ಮನೆಯಲ್ಲಿ ಹಣ ಪತ್ತೆ ಆಗಿದೆ. ಪೈಪ್‌ನಲ್ಲಿ 13.50 ಲಕ್ಷ, ಸೀಲಿಂಗ್‌ನಲ್ಲಿ 15 ಲಕ್ಷ ಹಣ ಪತ್ತೆ ಆಗಿದೆ. ಶಾಂತಗೌಡ ಬಿರಾದರ್ ಹೆಸರಿನಲ್ಲಿ 35 ಎಕರೆ ಜಮೀನು ಇರುವ ಬಗ್ಗೆ ತಿಳಿದುಬಂದಿದೆ. ಇದರಲ್ಲಿ ಕೇವಲ 2 ಎಕರೆ ಮಾತ್ರ ಪಿತ್ರಾರ್ಜಿತ ಆಸ್ತಿ ಇದೆ. ಶಾಂತಗೌಡ ಕೆಲಸಕ್ಕೆ ಸೇರಿದ ಬಳಿಕ ಜಮೀನು ಖರೀದಿ ಮಾಡಲಾಗಿದೆ. 
ಫಿಜಿಯೋಥೆರಪಿ ಡಾ. ರಾಜಶೇಖರ್ ‌ನಿವಾಸದ ಮೇಲೆ ಎಸಿಬಿ ದಾಳಿ ಮುಂದುವರಿದಿದೆ. ಸತತ 8 ಗಂಟೆಗಳಿಂದ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. 15 ಜನರ ತಂಡದಿಂದ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.
ಹೆಸ್ಕಾಂ ಸಿ ದರ್ಜೆ ನೌಕರ ನಾತಾಜಿ ಪಾಟೀಲ್ ಮನೆ ಮೇಲೆ ಎಸಿಬಿ ದಾಳಿ ನಡೆಸಿದೆ. ನಾತಾಜಿ ಪಾಟೀಲ್‌ನನ್ನು ಕಲ್ಲೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿಗೆ ಕರೆತಂದ ಎಸಿಬಿ ಅಧಿಕಾರಿಗಳು, ಶ್ರೀ ಕಲ್ಲೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿಯಲ್ಲಿ ಠೇವಣಿ ಇಟ್ಟಿರುವ ಹಣದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಬೆಳಗಾವಿ ತಾಲೂಕಿನ ಕಂಗ್ರಾಳಿ ಬಿ.ಕೆ.ಗ್ರಾಮದಲ್ಲಿ ಇರುವ ಸೊಸೈಟಿಯಲ್ಲಿ ಮಾಹಿತಿ ಪಡೆಯುತ್ತಿದ್ದಾರೆ. ನೇತಾಜಿ ಪಾಟೀಲ್‌ರನ್ನು ಸೊಸೈಟಿಯಲ್ಲಿ ಎಷ್ಟು ಪ್ರಮಾಣದ ಹಣ ಠೇವಣಿ ಇಟ್ಟಿದ್ದಾರೆ ಎಂಬ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಸದಾಶಿವ ಮರಲಿಂಗಣ್ಣನವರ್ ಮನೆಯಲ್ಲಿ ಚಿನ್ನಾಭರಣ ಪತ್ತೆ ಆಗಿದೆ. 1.135 ಕೆ.ಜಿ ಚಿನ್ನಾಭರಣ, ನಗದು 8,22,172 ಪತ್ತೆ ಆಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಆರ್‌ಟಿಒ ಮೋಟಾರು ವೆಹಿಕಲ್ ಇನ್ಸ್‌ಪೆಕ್ಟರ್‌ ಸದಾಶಿವ ಮನೆಯಲ್ಲಿ ಬೆಳ್ಳಿ ವಸ್ತುಗಳು, ಜಮೀನು, ಸೈಟ್ ದಾಖಲೆಗಳು ಪತ್ತೆ ಆಗಿದೆ.
ಶಿವಮೊಗ್ಗ ದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ಮುಂದುವರೆಸಿದ್ದಾರೆ. ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಮನೆ ಮೇಲೆ ದಾಳಿ ಮಾಡಿದ್ದಾರೆ. ಚಾಲುಕ್ಯ ನಗರದ ನಿವಾಸದಲ್ಲಿ ದಾಳಿ ಮುಂದುವರೆದಿದೆ. 
ಡಿ ಗ್ರೂಪ್ ನೌಕರ ಜಿ.ವಿ.ಗಿರಿ ಮನೆ ಮೇಲೆ ಎಸಿಬಿ ದಾಳಿ ಅಂತ್ಯವಾಗಿದೆ. ಬಾಗಲಗುಂಟೆಯ ಬಿಟಿಎಸ್ ಲೇಔಟ್‌ನಲ್ಲಿರುವ ಗಿರಿ ನಿವಾಸದಲ್ಲಿ ಎಸಿಬಿ ದಾಳಿ ಮುಕ್ತಾಯವಾಗಿದೆ. ಅಧಿಕಾರಿಗಳು ದಾಳಿ ಬಳಿಕ 3 ಬ್ಯಾಗ್‌ನಲ್ಲಿ ದಾಖಲೆ ಹೊತ್ತೊಯ್ದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಗೆದಷ್ಟು ಬ್ರಹ್ಮಾಂಡ ಭ್ರಷ್ಟಾಚಾರ ಬಯಲು!