Select Your Language

Notifications

webdunia
webdunia
webdunia
webdunia

ಭೂಸ್ವಾಧೀನಾಧಿಕಾರಿ ತೇಜಸ್ ಲಂಚ ಪಡೆಯುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳ ದಾಳಿ

ಭೂಸ್ವಾಧೀನಾಧಿಕಾರಿ ತೇಜಸ್ ಲಂಚ ಪಡೆಯುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳ ದಾಳಿ
bangalore , ಮಂಗಳವಾರ, 21 ಸೆಪ್ಟಂಬರ್ 2021 (21:40 IST)
ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿ.ಬಿ) ಯ ವಿಶೇಷ ಭೂಸ್ವಾಧೀನಾಧಿಕಾರಿ ತೇಜಸ್ ಲಂಚ ಪಡೆಯುತ್ತಿರುವ ವೇಳೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಳಿ ನಡೆಸುತ್ತಿದ್ದಾರೆ.
ಕೆಐಎಡಿ.ಬಿಯಿಂದ ಸ್ವಾಧೀನಕ್ಕೆ ಒಳಪಟ್ಟಿದ್ದ ಜಮೀನಿನ ಭೂಪರಿಹಾರ ಬಿಡುಗಡೆ ಮಾಡಲು ಚಿಂತಾಮಣಿಯ ನಿವಾಸಿಯೊಬ್ಬರಿಗೆ 13 ಲಕ್ಷ ನೀಡುವಂತೆ ತೇಜಸ್ ಬೇಡಿಕೆ ಇಟ್ಟಿದ್ದರು
ಈ ಸಂಬಂಧ 10.5 ಲಕ್ಷ ರೂ ಲಂಚ ಪಡೆದಿದ್ದರು. ಈಗ ಮತ್ತೆ 2 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ಮಂಗಳವಾರ 2 ಲಕ್ಷ ರೂ ಲಂಚ ಪಡೆಯುವಾಗ ಎಸಿಬಿ ಹಣದ ಹಣ ಸಮೇತ ತೇಜಸ್ ರನ್ನು ಬಂಧಿಸಲಾಗಿದೆ.
ಈ ಹಿಂದೆ ಇವರು ಕೆ.ಆರ್. ಪುರನ್ನ ತಹಶೀಲ್ದಾರ ಆಗಿದ್ದ ವೇಳೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು ಎಂದು ಮಾಹಿತಿ ದೊರೆತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಸ್ಲಿಂ ಮಹಿಳೆಗೆ ಡ್ರಾಪ್ ನೀಡಿದ ಹಿಂದೂ ಯುವಕನಿಗೆ ಕೆಲ ಮುಸ್ಲಿಂ ಪುಂಡರು ಹಲ್ಲೆ