ಎಸ್ ಸಿ ಪಿ- ಟಿಎಸ್ ಪಿ ಯೋಜನೆಯ ತಿದ್ದುಪಡಿ ವಿಚಾರ; ಸರ್ಕಾರಕ್ಕೆ ಖಡಕ್ ವಾರ್ನಿಂಗ್ ಕೊಟ್ಟ ಸಿದ್ದರಾಮಯ್ಯ

ಬುಧವಾರ, 18 ಸೆಪ್ಟಂಬರ್ 2019 (14:21 IST)
ಬೆಂಗಳೂರು : ರಾಜ್ಯ ಸರ್ಕಾರದ ಎಸ್ ಸಿ ಪಿ- ಟಿಎಸ್ ಪಿ ಯೋಜನೆಯ ತಿದ್ದುಪಡಿಯ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ರಾಜ್ಯದ ಬಿಜೆಪಿ ಸರ್ಕಾರದ ಬಣ್ಣ ಬಹಳ ಬೇಗ ಬಯಲಾಗುತ್ತಿದೆ. ತನ್ನ ನಿಜಬಣ್ಣ ದಲಿತ ವಿರೋಧಿ ಎನ್ನುವುದು ಸಾಬೀತಾಗ್ತಿದೆ. ನಮ್ಮ ಕಾಲದ ಕ್ರಾಂತಿಕಾರಿ ಎಸ್ ಸಿ ಪಿ-ಟಿಎಸ್ ಪಿ ಕಾಯ್ದೆಯನ್ನು ದುರ್ಬಲಗೊಳಿಸಲು ಹೊರಟರೆ ದಲಿತ ಸಮುದಾಯ ದಂಗೆ ಎದ್ದೀತು. ಅದ ಮುಂಚೂಣಿಯಲ್ಲಿ ನಾನೇ ಇರುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.


ಅಲ್ಲದೇ ಎಸ್ ಸಿ ಪಿ-ಟಿಎಸ್ ಪಿ ಯೋಜನೆಗೆ ತಿದ್ದುಪಡಿ ತಂದು, ಅನುದಾನ ಕಡಿತಗೊಳಿಸುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸರ್ಕಾರದ ದುಷ್ಟ ಆಲೋಚನೆಯ ವಿರುದ್ಧ ಕರ್ನಾಟಕದ ಬಿಜೆಪಿ ಶಾಸಕರು ಕೂಡ ದನಿ ಎತ್ತಬೇಕು ಎಂದು ವಿನಂತಿಸುತ್ತೇನೆ. ಇಂತಹ ದ್ರೋಹ ಚಿಂತನೆಯನ್ನು ಪಕ್ಷದ ದಾಸ್ಯಕ್ಕೆ ಕಟ್ಟುಬಿದ್ದು ಸಹಿಸಿಕೊಂಡರೆ ಇತಿಹಾಸ ಕ್ಷಮಿಸದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಚಲುವರಾಯಸ್ವಾಮಿ ಬಾಳೆ ಎಲೆ ಆಗಬೇಕೇ ಹೊರತು, ಎಂಜಲು ಎಲೆ ಆಗಬಾರದು- ಪುಟ್ಟರಾಜು ವಾಗ್ದಾಳಿ