Publish Date: Thu, 12 Oct 2017 (09:08 IST)
Updated Date: Thu, 12 Oct 2017 (09:10 IST)
ಬೆಂಗಳೂರು: ಅನಾರೋಗ್ಯಕ್ಕೊಳಗಾಗಿರುವ ಪತಿ ನಟರಾಜನ್ ಯೋಗ ಕ್ಷೇಮ ವಿಚಾರಿಸಲು ಐದು ದಿನಗಳ ಪರೋಲ್ ಪಡೆದು ಚೆನ್ನೈಗೆ ತೆರಳಿದ್ದ ಎಐಎಡಿಎಂಕೆ ಮಾಜಿ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಇಂದು ಮರಳಿ ಪರಪ್ಪನ ಅಗ್ರಹಾರ ಜೈಲು ಸೇರಲಿದ್ದಾರೆ.
ಬಂಧೀಖಾನೆ ಇಲಾಖೆ ಶಶಿಕಲಾಗೆ ಷರತ್ತುಬದ್ಧ ಪರೋಲ್ ನೀಡಿತ್ತು. ಅದರಂತೆ ಶಶಿಕಲಾ ಪತಿ ನಟರಾಜನ್ ಆರೋಗ್ಯ ವಿಚಾರಿಸುವುದರ ಹೊರತಾಗಿ ಯಾವುದೇ ಪಕ್ಷದ ಚಟುವಟಿಕೆ, ಸಭೆ, ಸಮಾಲೋಚನೆ ಮತ್ತು ಮಾಧ್ಯಮಗಳೊಂದಿಗೆ ಮಾತನಾಡುವಂತಿರಲಿಲ್ಲ.
ಈ ಐದೂ ದಿನಗಳಲ್ಲಿ ಶಶಿಕಲಾ ತಮ್ಮ ಪರೋಲ್ ಅರ್ಜಿಯಲ್ಲಿ ತಿಳಿಸಿದ್ದ ಮನೆಯಿಂದ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು. ಈ ಸಂದರ್ಭದಲ್ಲಿ ತಮ್ಮನ್ನು ನೋಡಲು ಬರುತ್ತಿದ್ದ ಬೆಂಬಲಿಗರತ್ತ ಕೈ ಬೀಸುತ್ತಿದ್ದರು. ಅಲ್ಲದೆ, ಹೋಗುವ ದಾರಿಯಲ್ಲಿ ಜಯಲಲಿತಾ ಹೆಚ್ಚಾಗಿ ಆರಾಧಿಸುತ್ತಿದ್ದ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ತೆರಳುತ್ತಿದ್ದರು ಎನ್ನಲಾಗಿದೆ. ಇಂದು ಸಂಜೆ 6 ಗಂಟೆಯೊಳಗೆ ಶಶಿಕಲಾ ಜೈಲಿಗೆ ವಾಪಸಾಗಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ