Select Your Language

Notifications

webdunia
webdunia
webdunia
Thursday, 10 April 2025
webdunia

ದೇವರಿಗೆ ವಿಭಿನ್ನ ರೀತಿಯಲ್ಲಿ ಸಂಜನಾ ಗೌರವ

ದೇವರಿಗೆ ವಿಭಿನ್ನ ರೀತಿಯಲ್ಲಿ ಸಂಜನಾ ಗೌರವ
bangalore , ಮಂಗಳವಾರ, 5 ಏಪ್ರಿಲ್ 2022 (20:35 IST)
ಬಹುಭಾಷಾ ನಟಿ ಸಂಜನಾ ಗಲ್ರಾನಿ 8 ತಿಂಗಳ ಗರ್ಭಿಣಿಯಾಗಿದ್ದಾರೆ. ಈ ಮಧ್ಯೆ ತಮ್ಮ ತಾಯ್ತನದ ಖುಷಿಯನ್ನು ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ಳುತ್ತಿದ್ದರು. ಆದರೆ ಭಾನುವಾರ ತಮ್ಮ ಬೋಳುತಲೆ ಫೋಟೋ ಶೇರ್ ಮಾಡಿಕೊಂಡಿದ್ದು, ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ. ಇನ್‍ಸ್ಟಾದಲ್ಲಿ ಫೋಟೋ ಶೇರ್ ಮಾಡಿರುವ ಸಂಜನಾ, ಸೌಂದರ್ಯವು ನೋಡುವವರ ದೃಷ್ಟಿಯಲ್ಲಿದೆ. ಅದಕ್ಕಾಗಿಯೇ ನಾನು ನನ್ನ ಕೂದಲನ್ನು ತ್ಯಾಗ ಮಾಡಿದ್ದೇನೆ. ನಾನು ದೇವರಿಗೆ ಯಾವ ರೀತಿ ನಮನ ಸಲ್ಲಿಸಬೇಕು ಎಂದು ನನಗೆ ತಿಳಿಯುತ್ತಿಲ್ಲ. ಹಲವಾರು ಕಷ್ಟಗಳನ್ನು ದಾಟಿದ ನಂತರ, ನನ್ನ ಜೀವನವು ಮತ್ತೊಮ್ಮೆ ಸುಂದರವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.  ನನ್ನ ಮಗು ನನ್ನ ಜೀವನದಲ್ಲಿ ಶೀಘ್ರದಲ್ಲೇ ಬರಲಿ ಎಂದು ನಾನು ನನ್ನ ಕೃತಜ್ಞತೆಯನ್ನು ಈ ರೀತಿ ವ್ಯಕ್ತಪಡಿಸಲು ಬಯಸುತ್ತೇನೆ. ಜೈ ಶ್ರೀ ಕೃಷ್ಣ, ಅಹಂ ಬ್ರಹ್ಮಾಸ್ಮಿ ಎಂದು ತಮ್ಮ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಪ್ರಿಲ್ 13ರವರೆಗೆ ಡೆಡ್​​ಲೈನ್