Select Your Language

Notifications

webdunia
webdunia
webdunia
webdunia

ಸಾನಿಯಾ ಮಿರ್ಜಾ ನಿವೃತ್ತಿ

Government
ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪ್ರಸಕ್ತ ಸಾಲಿನ ಕ್ರೀಡಾ ಋತು ಮುಕ್ತಾಯದ ನಂತರ ಟೆನಿಸ್ ಗೆ ವಿದಾಯ ಹೇಳುವುದಾಗಿ ಘೋಷಿಸಿದ್ದಾರೆ.
 
2022 ನನ್ನ ಪಾಲಿಗೆ ವೃತ್ತಿಜೀವನದ ಕೊನೆಯ ವರ್ಷವಾಗಲಿದೆ. ನನ್ನ ದೇಹ ಮೊದಲಿನಷ್ಟು ಫಿಟ್ ಇಲ್ಲ. ಅಲ್ಲದೇ ದಿನೇ ದಿನೇ ನನ್ನ ಆಡುವ ಬಯಕೆ ಕುಸಿಯುತ್ತಿದೆ ಎಂದು ಅವರು ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
2019ರಲ್ಲಿ ಮಗುವಿಗೆ ಜನ್ಮ ನೀಡಿದ ನಂತರ ಸಾನಿಯಾ ಮಿರ್ಜಾ ಹೆಚ್ಚು ಟೆನಿಸ್ ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಕೆಲವೊಂದು ಟೂರ್ನಿಗಳಲ್ಲೂ ಪಾಲ್ಗೊಂಡರೂ ಮಹತ್ವದ ಸಾಧನೆ ಮಾಡಲು ಅವರಿಂದ ಸಾಧ್ಯವಾಗುತ್ತಿಲ್ಲ.
 
ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ನಾಡಿಯಾ ಕಿಚ್ನೊಕ್ ಅವರೊಂದಿಗೆ ಅಖಾಡಕ್ಕೆ ಇಳಿದಿದ್ದ ಸಾನಿಯಾ ಡಬಲ್ಸ್ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದರು. ಇದರ ಬೆನ್ನಲ್ಲೇ ಸಾನಿಯಾ ನಿವೃತ್ತಿ ಘೋಷಣೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋವಿಡ್ ಪರೀಕ್ಷೆಗೆ ವಾಹನ ಮನೆಗೆ