Select Your Language

Notifications

webdunia
webdunia
webdunia
webdunia

ಕೋವಿಡ್ ಪರೀಕ್ಷೆಗೆ ವಾಹನ ಮನೆಗೆ

ಕೋವಿಡ್ ಪರೀಕ್ಷೆಗೆ ವಾಹನ ಮನೆಗೆ
ಬೆಂಗಳೂರು , ಬುಧವಾರ, 19 ಜನವರಿ 2022 (14:44 IST)
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮನೆಮನೆಗೂ ಹೋಗಿ, ತ್ವರಿತಗತಿಯಲ್ಲಿ ಕೋವಿಡ್/ಓಮಿಕ್ರಾನ್ ಸೋಂಕು ಪರೀಕ್ಷೆ ಮಾಡಲಿರುವ ಮತ್ತು ಸಾರ್ವಜನಿಕರು ತಾವಾಗಿಯೇ ವಾಹನಗಳಲ್ಲಿ ಬಂದು ಸೋಂಕು ಪರೀಕ್ಷೆ ಮಾಡಿಸಿಕೊಳ್ಳುವಂತಹ ವಿನೂತನ ಡ್ರೈವ್ ಥ್ರೂ/ವಾಕ್ ಇನ್ ವ್ಯವಸ್ಥೆಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಚಾಲನೆ ನೀಡಿದರು.
 
ಮಲ್ಲೇಶ್ವರಂನ 18ನೇ ಅಡ್ಡರಸ್ತೆಯಲ್ಲಿರುವ ಬಿಎಂಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊರೊನಾ ಮತ್ತು ಓಮಿಕ್ರಾನ್ ಸೋಂಕು ವೇಗವಾಗಿ ಹರಡುತ್ತಿದೆ. ಹೀಗಾಗಿ ಇಂತಹ ಸರಳ, ಸುಲಭ ಮತ್ತು ಸುರಕ್ಷಿತ ತಪಾಸಣಾ ವ್ಯವಸ್ಥೆ ಬೇಕಾಗಿತ್ತು. ಈ ಪರೀಕ್ಷೆಗಳು ಸಂಪೂರ್ಣ ಉಚಿತವಾಗಿವೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಅದನ್ನು ಕೂಡ ಒದಗಿಸಲಾಗುವುದು ಎಂದರು.
 
ಸಾರ್ವಜನಿಕರು ದ್ವಿಚಕ್ರ ವಾಹನ, ಆಟೋರಿಕ್ಷಾ, ಕಾರು ಇತ್ಯಾದಿಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಲು ಬಂದರೆ ವೈದ್ಯಕೀಯ ಸಿಬ್ಬಂದಿ ತಾವೇ ಖುದ್ದಾಗಿ ಗಂಟಲು ದ್ರವವನ್ನು ಸಂಗ್ರಹಿಸಿಕೊಳ್ಳಲಿದ್ದಾರೆ. ಪರೀಕ್ಷೆಯ ಫಲಿತಾಂಶವನ್ನು ಆಯಾ ವ್ಯಕ್ತಿಗಳ ಮೊಬೈಲ್ ಫೋನಿಗೆ ರವಾನಿಸಲಾಗುವುದು.
 
ಈ ಡ್ರೈವ್-ಇನ್/ವಾಕ್ ಥ್ರೂ ಕೇಂದ್ರವು ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೂ ಕಾರ್ಯನಿರ್ವಹಿಸಲಿದ್ದು, ಇದರಲ್ಲಿ ಗಂಟಲು ದ್ರವ ಸಂಗ್ರಾಹಕರು, ಲ್ಯಾಬ್ ಟೆಕ್ನೀಷಿಯನ್ ಮತ್ತು ಡೇಟಾ ಎಂಟ್ರಿ ಆಪರೇಟರ್‍ಗಳು ಇರುತ್ತಾರೆ. ಈ ವ್ಯವಸ್ಥೆಯನ್ನು ಮಲ್ಲೇಶ್ವರಂ ಕ್ಷೇತ್ರದ ಉಳಿದ ಭಾಗಗಳಿಗೂ ವಿಸ್ತರಿಸಲಾಗುವುದು. ಇಲ್ಲಿ ಯಾರು ಬೇಕಾದರೂ ಪರೀಕ್ಷೆ ಮಾಡಿಸಿಕೊಳ್ಳಬಹುದು ಎಂದು ಅವರು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಮೇಲಿನ ನಿರ್ಬಂಧ!