ಟೆಸ್ಲಾ ಇಂಡಿಯಾ ಮೋಟಾರ್ಸ್ ಮತ್ತು ಎನರ್ಜಿ ಪ್ರೈವೇಟ್ ಲಿಮಿಟೆಡ್ ಅನ್ನು ಆರ್‌ಒಸಿ (ಕಂಪನೀಸ್ ರಿಜಿಸ್ಟ್ರಾರ್) ಬೆಂಗಳೂರಿನಲ್ಲಿ ನೋಂದಾಯಿಸಿದೆ. ಕಂಪನಿಯು 1 ಲಕ್ಷ ರೂಪಾಯಿಗಳ ಪಾವತಿಸಿದ ಬಂಡವಾಳದೊಂದಿಗೆ ಪಟ್ಟಿಮಾಡದ ಖಾಸಗಿ ಘಟಕವಾಗಿ ನೋಂದಾಯಿಸಲ್ಪಟ್ಟಿದೆ.
ವಿಶ್ವದ ನಂಬರ್ ಶ್ರೀಮಂತ ಉದ್ಯಮಿ, ವಿದ್ಯುತ್ ವಾಹನಗಳ ಕಂಪನಿ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರನ್ನು ರಾಜ್ಯಗಳಿಗೆ ಆಹ್ವಾನಿಸುವ ಪಟ್ಟಿ ದೇಶದಲ್ಲಿ ಬೆಳೆಯುತ್ತಿದೆ. ಇದೀಗ ಕರ್ನಾಟಕವೂ ತಮ್ಮ ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಎಲಾನ್‌ಗೆ ಆಹ್ವಾನ ನೀಡಿದೆ.
ವಿದ್ಯುತ್ ವಾಹನಗಳಿಗೆ(ಇವಿ) ಭಾರತದಲ್ಲಿ ಕರ್ನಾಟಕ ಹಬ್ ಆಗಿದೆ. ಟೆಸ್ಲಾ ಘಟಕವನ್ನು ಸ್ಥಾಪಿಸಲು ಸೂಕ್ತ ತಾಣವಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ತೆಲಂಗಾಣ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಪಂಜಾಬ್ ಹಾಗೂ ತಮಿಳುನಾಡು ಈಗಾಗಲೇ ತಮ್ಮ ರಾಜ್ಯಗಳಲ್ಲಿ ಹೂಡಿಕೆ ಮಾಡುವಂತೆ ಎಲಾನ್ ಮಸ್ಕ್ ಅವರಿಗೆ ಆಹ್ವಾನ ನೀಡಿವೆ.