ಸ್ಪೇಷಲ್ ಟ್ರಾಫಿಕ್ ‌ಕಮೀಷನರ್ ಸಲಿಂ‌ ಸಾಹೇಬ್ರ ಕೆಲಸಕ್ಕೆ ಜನ ಸಲಾಂ

Webdunia
ಶನಿವಾರ, 3 ಡಿಸೆಂಬರ್ 2022 (17:16 IST)
ಸಿಲಿಕಾನ್ ಸಿಟಿಯ ಸಂಚಾರಿ ಪೊಲೀಸ್ರಿಗೆ ಸಾರ್ವಜನಿಕರ ಸಲಾಂ ಹೊಡೆದಿದ್ದು, ಸಲೀಂ ಸಾಹೇಬ್ರ ಈಜಿ ಮೆಥಡ್ ಗೆ ಜನ ಫಿದಾ ಆಗಿದ್ಧಾರೆ. ಪೀಕ್ ಟೈಮಲ್ಲಿ ಹೆವಿ ವೆಹಿಕಲ್ ಮೂಮೆಂಟ್ ಗೆ ಬ್ರೇಕ್ ಹಾಕಿದ್ದು, ಇದರಿಂದ ದೊಡ್ಡ ವಾಹನ ಓಡಾಡ್ದೇ ಇರೋದ್ರಿಂದ ಟ್ರಾಫಿಕ್ ಕೂಡ ಕಡಿಮೆಯಾಗಿದೆ ಇದರಿಂದ ವಾಹನ ಸವಾರರು ‌ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
 
 
ಹೆಬ್ಬಾಳ, ಕೆ.ಆರ್ ಮಾರ್ಕೆಟ್, ಲಿಂಗರಾಜಪುರ ಈ ಭಾಗದಲ್ಲಿ ಫುಲ್ ಟ್ರಾಫಿಕ್ ಫ್ರೀ ಆಗಿದ್ದು, ಇಷ್ಟು ದಿನ ವಾಹನ ಸವಾರರು ಹಿಡಿ ಶಾಪ ಹಾಕ್ಕೊಂಡೇ ರಸ್ತೆಗಿಳೀತಿದ್ರು. ಅಯ್ಯೋ ಆಫೀಸ್ ಗೆ ಬೇಗ ಹೋದ್ರೆ ಸಾಕಪ್ಪಾ. ಯಾವ ಏರಿಯಾದಲ್ಲೂ ಟ್ರಾಫಿಕ್ ಜಾಮ್ ಆಗ್ದೇ ಇರ್ಲಪ್ಪ ಅಂತಿದ್ರು. ಆದ್ರೆ, ಇದೀಗ ಪೀಕ್ ಟೈಮಲ್ಲಿ ಹೆವಿ ವೆಹಿಕಲ್ ಮೂಮೆಂಟ್ ಇರೋ ಕಡೆ ದೊಡ್ಡ ವಾಹನಕ್ಕೆ ಕಡಿವಾಣ ಹಾಕಲಾಗಿದೆ.
ಇದರಿಂದ ವಾಹನಗಳು ಸಲೀಸಾಗೇ ಸಾಗ್ತಿದ್ದಾವೆ. ಇದೀಗ ವಾಹನ ಸಂಚಾರಿ ಪೊಲೀಸರಿಗೆ ಜನಸ್ಪಂದನೆ ಸಿಗುತ್ತಿದೆ. ಬೇಷ್ ಬೆಂಗಳೂರು ಸಂಚಾರಿ ಪೊಲೀಸರೇ ಅಂತ ಟ್ವಿಟರ್ ನಲ್ಲೂ ಬರ್ಕೊಳ್ತಿದ್ದಾರೆ. ಇಷ್ಟು ಬೇಗ ಟ್ರಾಫಿಕ್ ಸಮಸ್ಯೆ ತೀರುತ್ತೆ ಅಂತ ತಿಳಿದೇ ಇರಲಿಲ್ಲ. ಹೀಗೆ ಹತ್ತಾರು ಪೋಸ್ಟ್ ಗಳು ಸಂಚಾರಿ ಪೊಲೀಸರ ಟ್ವಿಟರ್ ಖಾತೆಗೆ ಬರ್ತಿದ್ದಾವೆ. ಜಟಿಲವಾದ ಸಮಸ್ಯೆಗೆ ಸೂಕ್ಷ್ಮವಾದ ಉತ್ತರ ಕೊಟ್ಟ ಬೆಂಗಳೂರು ಸಂಚಾರಿ ಪೊಲೀಸರಿಗೆ ಮತ್ತೊಮ್ಮೆ ಹ್ಯಾಡ್ಸಾಫ್ ಮಾಡುತ್ತಿದ್ದಾರೆ.
 
ಇಷ್ಟುದಿನ ಟ್ರಾಫಿಕ್ ‌ಕಿರಿಕಿರಿಯಿಂದ ಬೇಸೆತ್ತಿದ್ದ ವಾಹನ ಸವಾರರು ಸ್ಪೇಷಲ್‌ ಕಮೀಷನರ್ ಕೆಲಸಕ್ಕೆ ಸಲಂ‌ ಹೊಡೆದು. ಸಾಧ್ಯವಾದಷ್ಟು ಮುಂದಿನ‌ ದಿನಗಳಲ್ಲಿ ಇನ್ನಷ್ಟು ‌ಟ್ರಾಫಿಕ್‌ನಿಂದ ಮುಕ್ತಿ‌ಸಿಗಲಿ ಅಂತಿದ್ದಾರೆ. ಇದರ ಜತೆಗೆ ಸಾರ್ವಜನಿಕರು ಕೂಡ ಸಂಚಾರಿ ನಿಯಮಗಳನ್ನ ಪಾಲನೆ ಮಾಡಿ ವಾಹನ ‌ಚಾನಲೆ ಮಾಡಿದ್ರೆ ಇನ್ನಷ್ಟು ‌ಕಡಿಮೆ‌ ಆಗಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾರಿಗೆ ಅಡ್ಡ ಬಂದ ನಾಯಿ: ಕಾರು ಪಲ್ಟಿಯಾಗಿ ಜನಸ್ನೇಹಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸಾವು

ನನ್ನೊಂದಿಗೆ ಆಟವಾಡಲು ಬರಬೇಡಿ: ಕೇಂದ್ರದ ವಿರುದ್ಧ ಬ್ಯಾನರ್ಜಿ ಕಿಡಿ

ಈ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲ್ಲ: ಮಲ್ಲಿಕಾರ್ಜುನ ಖರ್ಗೆ ಹಿಂಗದಿದ್ಯಾಕೆ

ದೇಶದ ಎರಡನೇ ಅತಿದೊಡ್ಡ ಮೀನು ಉತ್ಪಾದನಾ ರಾಜ್ಯವಾಗಿ ಗುಜರಾತ್

ಶಾಸಕರ ಖರೀದಿಗೆ ಹಣವಿದೆ, ರೈತರ ಸಂಕಷ್ಟಕ್ಕಿಲ್ಲ: ಜಗದೀಶ್ ಶೆಟ್ಟರ್ ಆಕ್ರೋಶ

ಮುಂದಿನ ಸುದ್ದಿ
Show comments