ಬೆಂಗೂರಿನ್ನ ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ಸಚಿವ ರಾಜನಾಥ್ ಸಿಂಗ್ ಆಗಮಿಸಿದ್ದಾರೆ.ಬೆಂಗಳೂರಿನ ಇಸ್ಕಾನ್ ದೇಗುಲದ ವತಿಯಿಂದ ಆಯೋಜಿಸಿರುವ ಗೀತಾ ಜಯಂತಿ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು,ಕಾರ್ಯಕ್ರಮದಲ್ಲಿ ಕೆಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗವಹಿಸಲಿದ್ದಾರೆ.ರಕ್ಷಣಾ ಸಚಿವರನ್ನು ನಗರಾಭಿವೃದ್ಧಿ ಸಚಿವರಾದ ಬೈರತಿ ಬಸವರಾಜು ಬರಮಾಡಿಕೊಂಡಿದ್ದಾರೆ.ಈ ಸಮಯದಲ್ಲಿ ಲೆಫ್ಟಿನೆಂಟ್ ಜನರಲ್ ಬಸಂತ್ ರೆಪ್ ಸ್ವಾಲ್, ಉತ್ತರಾಧಿ ಮಠದ ಸ್ವಾಮೀಜಿ ಸತ್ಯಧ್ಯಾನಾಚಾರ್, ಹೆಚ್. ಎ. ಎಲ್ ನ ವ್ಯವಸ್ಥಾಪಕ ನಿರ್ದೇಶಕರಾದ ಅನಂತ ಕೃಷ್ಣ ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.