Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ರೌಡಿಗಳನ್ನು ತಯಾರು ಮಾಡುವ ಫ್ಯಾಕ್ಟರಿ

ಕಾಂಗ್ರೆಸ್ ರೌಡಿಗಳನ್ನು ತಯಾರು ಮಾಡುವ ಫ್ಯಾಕ್ಟರಿ
bangalore , ಶನಿವಾರ, 3 ಡಿಸೆಂಬರ್ 2022 (17:02 IST)
ಧರ್ಮಗಳ ಆಧಾರಿತ ಶಿಕ್ಷಣ ವ್ಯವಸ್ಥೆ ನಮ್ಮ ಬಿಜೆಪಿ ಯಲ್ಲಿ ಇಲ್ಲ ಎಂದು ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್ ಅಶೋಕ್ ಹೇಳಿದಾರೆ.ಹಲವಾರು ಮುಸ್ಲಿಂ ಕಾಲೇಜುಗಳೂ ಇವೆ.ಆದರೆ ಅಲ್ಲಿ ಕೂಡಾ ಎಲ್ಲ ಧರ್ಮದವರೂ ಓದಬಹುದು.ಒಂದೇ ಧರ್ಮಕ್ಕೆ ಆಧಾರಿತ ಶಾಲೆಗಳು ಎಲ್ಲೂ ಇಲ್ಲ.ಇದು ಪಾಕಿಸ್ತಾನ,ಅಥವಾ ಇರಾನ್ ಅಲ್ಲ.ಅಲ್ಪ ಸಂಖ್ಯಾತರು ಶಾಲಾ ಕಾಲೇಜು ನಡೆಸಲು ಅನುಮತಿ ಕೊಡ್ತೇವೆ.ಆದರೆ  ಅಲ್ಲಿ ಎಲ್ಲಾ ಧರ್ಮದವರೂ ಓದಬಹುದು ಎಂದು ಹೇಳಿದ್ರು.
 
ಸೋಮಣ್ಣ ಅವರ ಮನೆಗೆ ಒಬ್ಬ ರೌಡಿ ಹೋಗಿದ್ದ ಎಂಬ ವಿಚಾರವಾಗಿಯೂ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು ಈಗಾಗಲೇ ಸೋಮಣ್ಣ ಒಳ್ಳೆಯ ಕ್ಲಾರಿಫಿಕೇಷನ್ ಕೊಟ್ಟಿದ್ದಾರೆ.ಸೋಮಣ್ಣ ಅವರಿಗೆ ಅಂತಹಾ ರಾಜಕೀಯ ಹಿನ್ನಲೆ ಇಲ್ಲ.ಅವರು ಬಸವ ತತ್ವದ ಆಧಾರದ ಮೇಲೆ ಇರುವವರು.ಕಾಂಗ್ರೆಸ್ ಕಾಲದಲ್ಲಿ ಅನೇಕ ರೌಡಿಗಳು ಬೆಳೆದಿದ್ದಾರೆ.ಕಾಂಗ್ರೆಸ್ ರೌಡಿಗಳನ್ನು ತಯಾರು ಮಾಡುವ ಫ್ಯಾಕ್ಟರಿಯಾಗಿದೆ.ಕಾಂಗ್ರೆಸ್ ನಂತೆ ನಮ್ಮದು ಗೂಂಡಾ ರಾಜಕಾರಣ ಮಾಡಲ್ಲ.ಕೇಸರಿ ಹಾಕಿದ ತಕ್ಷಣ ಅವರು ಬಿಜೆಪಿ ಸೇರಿದ್ರು ಅಂತಾ ಅರ್ಥವಲ್ಲ ಎಂದು ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ರು.
 
ಕಾಂಗ್ರೆಸ್ ನಾಯಕರ ಕಾರ್ಯಕ್ರಮ ಗಳಲ್ಲಿ ಕೂಡಾ ಅನೇಕ ರೌಡಿಗಳು ಭಾಗವಹಿಸಿದ್ದು ಇದೆ.ಫೈಟರ್ ರವಿ ಪಕ್ಷಕ್ಕೆ ಸೇರಿದ್ದು ನಮ್ಮ ಗಮನಕ್ಕೆ ಬಂದಿಲ್ಲ..ಮಅದರ ಬಗ್ಗೆ  ರಾಜ್ಯಾದ್ಯಕ್ಷರ ಜೊತೆ ಮಾತಾಡುತ್ತೇನೆ.ಯಾವುದೇ ರೌಡಿ ಹಿನ್ನೆಲೆ ಇರುವ ವ್ಯಕ್ತಿ ಗೆ ಬಿಜೆಪಿ ಯಲ್ಲಿ ಸ್ಥಾನ ಇಲ್ಲ.ಅಂತಹದ್ದು ಯಾವುದೇ ಪ್ರಕರಣ ಇದ್ರೆ ರಾಜ್ಯಾದ್ಯಕ್ಷರು ಕ್ರಮ ತಗೊಳ್ತಾರೆ ಎಂದು ಆರ್ ಅಶೋಕ್ ಹೇಳಿದ್ರು.
 

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗೂರಿಗೆ ಆಗಮಿಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್