ಬಾಲಕಿಗೆ ಅಶ್ಲೀಲ ಚಿತ್ರ ತೋರಿಸಿ ಮೌಲ್ವಿಯೊಬ್ಬನ ವಿಕೃತ ಕೃತ್ಯ

Webdunia
ಶುಕ್ರವಾರ, 19 ಜನವರಿ 2018 (13:27 IST)
ಮುಂಬೈ: ನಾಂದೇಡ್‌ನ‌ಮಜಲ್‌ಗಾಂವ್‌ನಲ್ಲಿ ಕಾಮುಕ ಮೌಲ್ವಿ ಸಬೇರ್‌ ಫಾರೂಕಿ ಎಂಬಾತ 12 ವರ್ಷದ ಬಾಲಕಿಗೆ ಅಶ್ಲೀಲ ಚಿತ್ರ ತೋರಿಸಿ ಬರ್ಬರವಾಗಿ ಅತ್ಯಾಚಾರ ಎಸಗಿದ್ದಾನೆ. ತನ್ನ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಸ್ಥಳದಿಂದ ಮೌಲ್ವಿ ಪರಾರಿಯಾಗಿದ್ದಾನೆ. 


ಈ ಘಟನೆಯ ಕುರಿತಾಗಿ  ಪೊಲೀಸರಿಗೆ ದೂರು ನೀಡದಂತೆ ಸಂತ್ರಸ್ತೆಯ ತಾಯಿಗೆ ಗ್ರಾಮದ ಮೂವರು ರಾಜಕಾರಣಿಗಳಾದ ಎಐಎಐಎಂ ನ ನಾಯಕ ಇಬ್ರಿಷ್‌ ಭಗವಾನ್‌ , ಎನ್‌ಸಿಪಿ ನಾಯಕ ನಾವಾಬ್‌ ಪಟೇಲ್‌  ಮತ್ತು ಖಲೀಲ್‌ ಪಟೇಲ್‌ ಒತ್ತಡವನ್ನು ಹೇರಿದ್ದಾರೆ. ಆದರೆ ಬೆದರಿಕೆಗೆ ಹೆದರದೆ ಸಂತ್ರಸ್ತೆಯ ತಾಯಿ  ಗುರುವಾರ ಇಟ್ವಾರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಒತ್ತಡ ಹೇರಿದ ಆರೋಪದಲ್ಲಿ ಪೊಲೀಸರು ಮೂವರು ರಾಜಕಾರಣಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


ಅದೂ ಅಲ್ಲದೇ, ಆರೋಪಿ ಮೌಲ್ವಿ ಇನ್ನೊಬ್ಬ ಬಾಲಕಿಯ ಮೇಲೂ ದೌರ್ಜನ್ಯ ಎಸಗಿದ್ದ ಎನ್ನುವುದು ಬೆಳಕಿಗೆ ಬಂದಿದೆ. ಪ್ರಕರಣವನ್ನು ಡೀಲ್‌ ನಲ್ಲಿ ಮುಗಿಸಲು ಮುಂದೆ ಬಂದಿರುವ ಮೌಲ್ವಿ ಸಂತ್ರಸ್ತೆಯ ತಾಯಿಯೊಂದಿಗೆ ಮಾತುಕತೆಗೆ ಆಗಮಿಸಿದ್ದಾಗ  ಸ್ಥಳಿಯರು ಅವನಿಗೆ ಥಳಿಸಿದ್ದರು. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಹಿಳೆಯರಿಗೆ ಸಿದ್ದರಾಮಯ್ಯ ಸರ್ಕಾರದ ಗಿಫ್ಟ್: ಇನ್ನು ತಿಂಗಳಿಗೊಂದು ವೇತನ ಸಹಿತ ಮುಟ್ಟಿನ ರಜೆ

17ಮಕ್ಕಳ ಸಾವಿಗೆ ಕಾರಣಾವಾದ ಕೆಮ್ಮು ಸಿರಪ್‌ ಕಂಪನಿಯ ಮಾಲೀಕ ಕೊನೆಗೂ ಅರೆಸ್ಟ್‌

ಉರಿಸೋದು ಅಂದ್ರೆ ಇದು... ಊಟದ ಮೆನುವಿನಲ್ಲಿ ಪಾಕಿಸ್ತಾನವನ್ನು ಹುರಿದು ಮುಕ್ಕಿದ ಭಾರತೀಯ ಸೇನೆ

ಐಪಿಎಸ್‌ ಅಧಿಕಾರಿ ವೈ.ಪೂರನ್‌ ಕುಮಾರ್‌ ಆತ್ಮಹತ್ಯೆಯ ಕಾರಣ ಬಹಿರಂಗಪಡಿಸಿದ ಪತ್ನಿ ಅಮ್ನೀತ್‌

ಬೆಸ್ಟ್ ಫಿನ್ಟೆಕ್ ಇನ್ಶುರೆನ್ಸ್ ಅವಾರ್ಡ್ ಪಡೆದ ಡಿಜಿಟ್ ಇನ್ಶುರೆನ್ಸ್

ಮುಂದಿನ ಸುದ್ದಿ