Select Your Language

Notifications

webdunia
webdunia
webdunia
webdunia

ಉಕ್ರೇನ್​ ಮೇಲೆ ರಷ್ಯಾ ಭೀಕರ ದಾಳಿ; ಸಾವಿನ ಮನೆಯಾದ ಉಕ್ರೇನ್

ಉಕ್ರೇನ್​ ಮೇಲೆ ರಷ್ಯಾ ಭೀಕರ ದಾಳಿ; ಸಾವಿನ ಮನೆಯಾದ ಉಕ್ರೇನ್
bangalore , ಮಂಗಳವಾರ, 8 ಮಾರ್ಚ್ 2022 (19:51 IST)
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವುದನ್ನು ಖಂಡಿಸಿ ರಷ್ಯಾದಲ್ಲಿ ಐಬಿಎಂ ತನ್ನ ಎಲ್ಲ ವ್ಯವಹಾರಗಳನ್ನು ಸ್ಥಗಿತಗೊಳಿಸಿದೆ. ಅದೇರೀತಿಯಾಗಿ ರಷ್ಯಾದಿಂದ ತೈಲ ಆಮದು ನಿಷೇಧದ ಬಗ್ಗೆ ನಿರ್ಧರಿಸಿಲ್ಲವೆಂದು ಅಮೆರಿಕ ಹೇಳಿದೆ.ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಪಟ್ಟಣದ ವಿದ್ಯಾರ್ಥಿನಿ ರುಬಿನಾ ಉಕ್ರೇನ್​ನಿಂದ ತವರೂರಿಗೆ ಆಗಮಿಸಿದ್ದಾರೆ. ಮನೆಗೆ ಬಂದ ಮಗಳಿಗೆ ತಂದೆ-ತಾಯಿ ಸಾಂಪ್ರದಾಯಿಕವಾಗಿ ದೃಷ್ಟಿ ತೆಗೆದು ಸ್ವಾಗತಿಸಿದ್ದಾರೆ. ಮಗಳನ್ನು ಕಂಡು ತಂದೆ ಹುಸೇನ್ ಪಾಷಾ ಹಾಗೂ ತಾಯಿ ಜುಬೇದಾಬೇಗಂ ಭಾವುಕರಾದರು. ಬಳಿಕ ಉಕ್ರೇನ್ ಕಹಿ ಘಟನೆ ಬಗ್ಗೆ ರುಬಿನಾ ಹೇಳಿಕೆ ನೀಡಿದ್ದಾರೆ. ಮದರ್ ಲ್ಯಾಂಡ್ ಅಂದ್ರೇನೆ ವೈಬ್ರೇಟ್ ಆಗತ್ತೆ. ಉಕ್ರೇನ್​ನಲ್ಲಿ ನಮ್ಮನ್ನ ಕಾಪಾಡಿದ್ದೇ ಭಾರತದ ಫ್ಲಾಗ್. ನಮಗೆ ರಕ್ಷಣೆಯಾಗಿ, ಸೆಕ್ಯುರಿಟಿಯಾಗಿ ಭಾರತ ಧ್ವಜ ನಮ್ಮ ಜೊತೆಗಿತ್ತು. ಭಾರತ ಧ್ವಜ ತೋರಿಸಿದಾಗ ಶೆಲ್ಲಿಂಗ್ ನಿಲ್ಲಿಸಿದ್ದ ಸೇನೆ. ಭಾರತೀಯಳು ಅಂತ ಹೇಳಿಕೊಳ್ಳೊಕೆ ಹೆಮ್ಮೆಯಾಗುತ್ತೆ. ನಮಗೆ ಅವಕಾಶ ಕೊಟ್ಟ ಉಕ್ರೇನ್ ಸ್ಥಿತಿ ಏನು..?ಅದನ್ನ ನೆನಪಿಸಿಕೊಂಡ್ರೆ ತುಂಬಾ ಕಾಡುತ್ತೆ ಎಂದು ಹೇಳಿದ್ದಾರೆ.ತುಮಕೂರು ಜಿಲ್ಲೆಗೆ ಇದುವರೆಗೂ ಒಟ್ಟು 19 ವಿದ್ಯಾರ್ಥಿಗಳ ಆಗಮನ; 5 ವಿದ್ಯಾರ್ಥಿಗಳು ಬಾಕಿ
ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ದ ಹಿನ್ನೆಲೆ, ತುಮಕೂರು ಜಿಲ್ಲೆಗೆ ಇದುವರೆಗೂ ಒಟ್ಟು 19 ವಿದ್ಯಾರ್ಥಿಗಳು ಆಗಮಿಸಿದ್ದಾರೆ. 19 ವಿದ್ಯಾರ್ಥಿ ಗಳು ತಮ್ಮ ಮನೆಗಳಿಗೆ ವಾಪಸ್ಸಾಗಿದ್ದು, ಇನ್ನೂ 5 ವಿದ್ಯಾರ್ಥಿಗಳು ಬರಬೇಕಿದೆ. ಸದ್ಯ ಮೂವರು ವಿದ್ಯಾರ್ಥಿಗಳು ರೋಮಾನಿಯಾ ಬಾರ್ಡರ್ ನಲ್ಲಿ ಇರುವುದಾಗಿ ಮಾಹಿತಿಯಿದ್ದು, ಒಬ್ಬರು ಸುಮಿ ಹಾಗೂ ಮತ್ತೋಬ್ಬರು ಅರ್ಮೆನಿರಾದಲ್ಲಿ ಇರುವುದಾಗಿ ಮಾಹಿತಿ ಲಭ್ಯವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಲ್ಲಿದ್ದರೆ ಬಿಳಿ ಎಕ್ಕ ವಾಸ್ತು ದೋಷವೂ ನಿವಾರಣೆ