Select Your Language

Notifications

webdunia
webdunia
webdunia
webdunia

ಲೋಕಾಯುಕ್ತ ಬಲೆಗೆ ಬಿದ್ದ RTO ಅಧಿಕಾರಿ

ಲೋಕಾಯುಕ್ತ ಬಲೆಗೆ ಬಿದ್ದ RTO ಅಧಿಕಾರಿ
ಬಳ್ಳಾರಿ , ಶುಕ್ರವಾರ, 17 ನವೆಂಬರ್ 2023 (20:00 IST)
RTO ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಖಚಿತ ಮಾಹಿತಿ ಮೇರೆಗ ಬಳ್ಳಾರಿ ನಗರದ RTO ಕಚೇರಿ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, RTO ಅಧೀಕ್ಷ ಚಂದ್ರಕಾಂತ ಗುಡಿಮನಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಏಜೆಂಟ್ ಮೊಹಮ್ಮದ್ ರಾಜ್ ಎಂಬುವರ ಬಳಿ 15 ಸಾವಿರ ರೂಪಾಯಿ ಲಂಚ ತೆಗೆದುಕೊಳ್ಳವಾಗ ದಾಳಿ ನಡೆಸಿ ರೆಡ್‌ಹ್ಯಾಂಡಾಗಿ ಚಂದ್ರಕಾಂತ್ ಸಿಕ್ಕಿಬಿದ್ದಿದ್ದಾರೆ.

ಇಬ್ಬರನ್ನು ಬಳ್ಳಾರಿಯ ಹಾಲಿ ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದ್ದು, ಬಳಿಕ ನ್ಯಾಯಾಲಯಕ್ಕೆ ಆರೋಪಿಗಳನ್ನ ಹಾಜರುಪಡಿಸಲಾಗಿದೆ. ಇನ್ನು, ಸಾರ್ವಜನಿಕರಿಂದ RTO ಅಧಿಕಾರಿಗಳ ಮೇಲೆ ಸಾಕಷ್ಟು ದೂರುಗಳು ಕೇಳಿಬಂದಿದ್ದು, ಇತ್ತೀಚೆಗೆ ಶಾಸಕ ಭರತ್ ರೆಡ್ಡಿ ಈ ಕುರಿತು RTO ಕಛೇರಿಗೆ ಭೇಟಿ ನೀಡಿ ಖಡಕ್ ಎಚ್ಚರಿಕೆ ನೀಡಿದ್ರು. ಆದ್ರೂ ಅಧಿಕಾರಿಗಳು ತಮ್ಮ ಲಂಚಾವತಾರ ತೋರಿದ್ದು, ಸದ್ಯ ಇಂದು ಚಂದ್ರಕಾಂತ ಅವರನ್ನ ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಾಂತ್ರಿಕ ದೋಷ ; KSRTC ಬಸ್‌ನಲ್ಲಿ ಹೊಗೆ