Publish Date: Tue, 29 Nov 2022 (19:23 IST)
Updated Date: Tue, 29 Nov 2022 (19:27 IST)
ಉತ್ತರ ಪ್ರದೇಶದ ಗೋರಖ್ಪುರದ ಆಭರಣ ಮಳಿಗೆಯೊಂದರಲ್ಲಿ ಮಹಿಳೆಯೊಬ್ಬಳು ರೂ. 7 ಲಕ್ಷದ ನೆಕ್ಲೇಸ್ ಅನ್ನು ಕದ್ದಿದ್ದಾಳೆ. ಈಕೆ ಆಭರಣವನ್ನು ಕದಿಯುವ ಈ ದೃಶ್ಯ ಆಭರಣ ಮಳಿಗೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಇದೀಗ ವೈರಲ್ ಆಗಿದೆ. ಈ ಮಹಿಳೆಯು ಮಾಸ್ಕ್ ಮತ್ತು ಕಪ್ಪುಬಣ್ಣದ ಕೂಲಿಂಗ್ ಗ್ಲಾಸ್ ಧರಿಸಿದ್ದಾಳೆ. ನೆಟ್ಟಿಗರು ಈ ವಿಡಿಯೋ ನೋಡಿ ಬೆಚ್ಚಿಬಿದ್ದಿದ್ದಾರೆ. ಈ ಘಟನೆ ನಡೆದಿದ್ದು ನವೆಂಬರ್ 17ರಂದು. ಬಲದೇವ್ ಪ್ಲಾಝಾದ ಬೇಚೂಲಾಲ್ ಸರಾಫ್ ಪ್ರೈವೇಟ್ ಲಿಮಿಟೆಡ್ ಎಂಬ ಆಭರಣ ಅಂಗಡಿಗೆ ಈ ಮಹಿಳೆ ನೆಕ್ಲೇಸ್ ಖರೀದಿಸಲು ಹೋಗಿದ್ದಾಳೆ. ಆಭರಣವನ್ನು ಸಮೀಪದಿಂದ ನೋಡುತ್ತಿರುವಂತೆ ಒಂದೆರಡು ಸಲ ನಟಿಸುತ್ತಾಳೆ. ಹೀಗೆ ಮಾಡುತ್ತಲೇ ನೆಕ್ಲೇಸ್ನ ಬಾಕ್ಸ್ಗಳನ್ನು ತನ್ನ ತೊಡೆಯ ಮೇಲೆ ಇಟ್ಟುಕೊಳ್ಳುತ್ತಾಳೆ. ನಂತರ ಒಂದನ್ನು ಮಾತ್ರ ಕೌಂಟರಿನ ಮೇಲೆ ಇಡುತ್ತಾಳೆ. ತೊಡೆಯ ಮೇಲೆ ಇಟ್ಟುಕೊಂಡ ಬಾಕ್ಸ್ ಅನ್ನು ಸೀರೆಯಿಂದ ಮರೆಮಾಚುತ್ತಾಳೆ. ಸಿಸಿಟಿವಿಯಲ್ಲಿ ಸೆರೆಯಾದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಹೌಹಾರಿದ್ದಾರೆ. ನಪತ್ತೆ ಯಾಗಿರುವ ಕಳ್ಳಿಯನ್ನ ಹುಡುಕಡುತ್ತಿದ್ದಾರೆ