Select Your Language

Notifications

webdunia
webdunia
webdunia
webdunia

ಬ್ಯಾಂಕ್ ಒಳಗೆ ನುಗ್ಗಿ ರೌಡಿಯ ಬರ್ಬರ ಹತ್ಯೆ

ಬ್ಯಾಂಕ್ ಒಳಗೆ ನುಗ್ಗಿ ರೌಡಿಯ ಬರ್ಬರ ಹತ್ಯೆ
bengaluru , ಸೋಮವಾರ, 19 ಜುಲೈ 2021 (15:44 IST)
ಪತ್ನಿಯೊಂದಿಗೆ ಬ್ಯಾಂಕ್ ಗೆ ಬಂದಿದ್ದ ರೌಡಿಯೊಬ್ಬನನ್ನು 8 ಮಂದಿ ದುಷ್ಕರ್ಮಿಗಳು ಹಾಡುಹಗಲೇ ಬ್ಯಾಂಕ್ ಒಳಗೆ ಮಾರಕಾಸ್ತ್ರಗಳಿಂದ
ಕೊಚ್ಚಿ ಕೊಲೆಗೈದ ಭೀಕರ ಘಟನೆ ರಾಜಧಾನಿ ಬೆಂಗಳೂರಿನ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೋರಮಂಗಲ 8ನೇ ಬ್ಲಾಕ್ ನ ಯೂನಿಯನ್ ಬ್ಯಾಂಕ್ ನಲ್ಲಿ ಸೋಮವಾರಮಟ ಮಟ ಮಧ್ಯಾನ ರೌಡಿಶೀಟರ್ ಬಬ್ಲಿ ಎಂಬಾತನ ಹತ್ಯೆ ಮಾಡಲಾಗಿದೆ.
ಪತ್ನಿ ಜೊತೆ ಬ್ಯಾಂಕ್‌ಗೆ ಆಗಮಿಸಿದ್ದ ರೌಡಿಶೀಟರ್ ಬಾಬ್ಲಿಯನ್ನು ಹಿಂಬಾಲಿಸಿದ ಮಾರಕಾಸ್ತ್ರಗಳನ್ನು ಹಿಡಿದಿದ್ದ 8 ಮಂದಿಯ ದುಷ್ಕರ್ಮಿಗಳ ತಂಡ ಬ್ಯಾಂಕ್ ಒಳಗೆ ನುಗ್ಗಿ ಕೊಚ್ಚಿ ಕೊಲೆ ಮಾಡಿದೆ.
ಆಗ್ನೇಯ ವಿಭಾಗ ಡಿಸಿಪಿ‌‌ ಜೋಷಿ‌ ಶ್ರೀನಾಥ್ ಮಹದೇವ್ ಸ್ಥಳಕ್ಕೆ ಕೋರಮಂಗಲ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಉದ್ಯಮಿ ಮನೆ ದೋಚಿದ್ದ ಬಿಹಾರಿ ಕಳ್ಳರ ಬಂಧನ