Select Your Language

Notifications

webdunia
webdunia
webdunia
webdunia

ಗಾಂಜಾ ಮಾರುತ್ತಿದ್ದ 13 ರೌಡಿಗಳು ಅರೆಸ್ಟ್: 21 ಕೆಜಿ ಗಾಂಜಾ ವಶ

rowday
bengaluru , ಸೋಮವಾರ, 19 ಜುಲೈ 2021 (15:00 IST)
ಐಷಾರಾಮಿ ಜೀವನಕ್ಕಾಗಿ ಗಾಂಜಾ ಮಾರುತ್ತಿದ್ದ 13 ರೌಡಿಗಳನ್ನು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ.
ಮಲಯಾಳಿ ಮಧು, ಲಿಖಿನ್, ಅಯ್ಯಪ್ಪ, ಕಾರಿಯ
ಪ್ಪ, ಸಾಗರ್, ಸುಮಂತ್, ಕಿರಣ್, ಮುನಿಕೃಷ್ಣ, ಶಿವರಾಜ್, ಜಬಿವುಲ್ಲ, ಪ್ರಮೋದ, ಮಂಜುನಾಥ್, ಸ್ಟಾಲಿನ್ ಬಂಧಿತ ಆರೋಪಿಗಳು.
ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಗಾಂಜಾ ಮಾರಾಟ ಹಾಗೂ ರೌಡಿ ಅಕ್ಟಿವಿಟೀಸ್ ನಲ್ಲಿ ಭಾಗಿಯಾಗಿದ್ದ ಈ 13 ಮಂದಿ ಬಂಧಿತರಿಂದ 21 ಕೆಜಿ 350 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಬಂಧಿತರೆಲ್ಲರೂ ಕುಮಾರಸ್ವಾಮಿ ಲೇಔಟ್ ರೌಡಿಶೀಟರ್ ಮಲಯಾಳಿ ಮಧು ಸಹಚರರಾಗಿದ್ದು, ಐಶರಾಮಿ ಜೀವನಕ್ಕಾಗಿ ಗಾಂಜಾ ಮಾರಾಟಕ್ಕೆ ಇಳಿದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಎನ್ ಡಿ ಪಿಎಸ್ ಆಕ್ಟ್ ಅಡಿ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದಕ್ಷಿಣ ವಿಭಾಗ ಡಿಸಿಪಿ ಹರೀಶ್ ಪಾಂಡೆ ನೇತೃತ್ವದಲ್ಲಿ ಕಾರ್ಯಚರಣೆ ನಡೆಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಸಿಸಿಬಿ ಇನ್ ಸ್ಪೆಕ್ಟರ್ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗೆ ವಂಚನೆ!