Select Your Language

Notifications

webdunia
webdunia
webdunia
webdunia

ಉದ್ಯಮಿ ಮನೆ ದೋಚಿದ್ದ ಬಿಹಾರಿ ಕಳ್ಳರ ಬಂಧನ

bengaluru
bengaluru , ಸೋಮವಾರ, 19 ಜುಲೈ 2021 (15:30 IST)
ಉದ್ಯಮಿಯೊಬ್ಬರ ಮನೆಯಲ್ಲಿ ಚಿನ್ನಾಭರಣ ಹಾಗೂ ನಗದನ್ನು ದೋಚಿದ್ದ ಬಿಹಾರಿ ಮೂಲದ ನಾಲ್ವರು ಆರೋಪಿಗಳು ಅಂದರ್ ಆಗಿದ್ದಾರೆ.
ಕೋರಮಂಗಲ ಪೊಲೀಸರಿಂದ  4 ಜನ ಬಿಹಾರಿ ಕಳ್ಳರನ್ನು ಬಂಧಿಸಿದ್ದಾರೆ.. ಚೋಟು ಅಲಿಯಾಸ್ರಾ ಮಬಿಂದು,ರಂಜಿತ್,ಗೌತಮ್ ಕುಮಾರ್ ಹಾಗೂ ಪಂಕಜ್ ಬಂಧಿತರು. ಬಂಧಿತರಿಂದ 20 ಲಕ್ಷ ಮೌಲ್ಯದ 17 ಕೆಜಿ 450 ಗ್ರಾಂ ಬೆಳ್ಳಿ ಆಭರಣ, ಎರಡು ದುಬಾರಿ ವಾಚ್ ನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿಗಳು ಬಿಹಾರದ ನಗವಾಸ್ ಮೂಲದ ಆರೋಪಿಗಳು..ಕೋರಮಂಗಲ ೫ ನೇ ಬ್ಲಾಕ್ ನಲ್ಲಿ ಉದ್ಯಮಿಯೊಬ್ಬರ ಮನೆಯಲ್ಲಿ ಆರೋಪಿ ಚೋಟು ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ.
ಇತ್ತೀಚೆಗೆ ಆ ಉದ್ಯಮಿ, ಕುಟುಂಬ ಸಮೇತ ಹೊರ ರಾಜ್ಯಕ್ಕೆ ಪ್ರವಾಸ ಹೋದಾಗ ಹೌಸ್ ಕೀಪಿಂಗ್ ಚೋಟು‌ ಹಾಗೂ ಆತನ ಸಹಚರರು  ಮನೆಯಲ್ಲಿದ್ದ 20 ಲಕ್ಷ ಮೌಲ್ಯದ 17 ಕೆಜಿ ೪೫೦ ಗ್ರಾಂ ಬೆಳ್ಳಿ ಆಭರಣ ಕಳ್ಳತನ ಮಾಡಿದ್ದರು. ಕೋರಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಶ್ರುತಿಗೆ ಪ್ರವಾಸೋದ್ಯಮ ನಿಗಮದಿಂದ ಔಟ್; ಮದ್ಯಪಾನ ಮಂಡಳಿಗೆ ಇನ್!