Publish Date: Sun, 17 Dec 2017 (08:06 IST)
Updated Date: Sun, 17 Dec 2017 (08:20 IST)
ತುಮಕೂರು: ಜೆ.ಡಿ.ಎಸ್ ಶಾಸಕ ಸಿ.ಬಿ. ಸುರೇಶ್ ಬಾಬು ಅವರ ಸಹೋದರ ದಯಾನಂದ್ ಅವರು ವಕೀಲರ ಮೇಲೆ ಹಲ್ಲೆ ಮಾಡಿದ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪುರಸಭೆ ಕಚೇರಿಯಲ್ಲಿ ನಡೆದಿದೆ.
ಅಳವಡಿಸಿದ್ದ ಫ್ಲೆಕ್ಸ್ ಗಳ ಬಗ್ಗೆ ವಕೀಲ ಮಂಜುನಾಥ್ ಅವರು, ಪುರಸಭೆಯ ಸಿಇಒ ಮಂಜುಳಾ ಅವರ ಬಳಿ ಮಾಹಿತಿ ಕೇಳಿದ್ದಕ್ಕೆ ಕೋಪಗೊಂಡ ದಯಾನಂದ್ ಅವರು ಪುರಸಭೆಯ ಕಚೇರಿಯಲ್ಲೇ ಅವರ ಮೇಲೆ ಹಲ್ಲೆ ಮಾಡಿದರು.
ಇವರು ಚಿಕ್ಕನಾಯಕನ ಹಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ ಸಿಬಿ ಸುರೇಶ ಅವರ ಸಹೋದರರಾಗಿದ್ದು, ಪುರಸಭೆಯ ಮಾಜಿ ಅಧ್ಯಕ್ಷರು ಕೂಡ ಆಗಿದ್ದರು. ದಯಾನಂದ್ ಅವರು ವಕೀಲ ಮಂಜುನಾಥ್ ಅವರ ಮೇಲೆ ಹಲ್ಲೆ ನಡೆಸಿದ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ