Publish Date: Tue, 22 Aug 2017 (13:16 IST)
Updated Date: Tue, 22 Aug 2017 (13:18 IST)
ನನ್ನ ಹತ್ಯೆಗೆ ಕಂಪ್ಲಿ ಶಾಸಕ ಸುರೇಶ ಬಾಬು ಸುಪಾರಿ ನೀಡಿದ್ದಾರೆ ಎಂದು ಉದ್ಯಮಿ ಟಪಾಲ್ ಗಣೇಶ್ ಆರೋಪಿಸಿದ್ದಾರೆ.
ಶಾಸಕ ಸುರೇಶ್ ಬಾಬು ಕಡೆಯವರೇ ನನ್ನ ಹತ್ಯೆಗೆ ಸುಪಾರಿ ನೀಡಿದ್ದರ ಬಗ್ಗೆ ಮಾಹಿತಿ ನೀಡಿದ್ದಾರೆ. ಗಣಿಗಾರಿಕೆ ಕುರಿತಂತೆ ನನ್ನ ವಿರುದ್ಧ ಶಾಸಕ ಸುರೇಶ್ ದ್ವೇಷ ಸಾಧಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕಳೆದ 2009ರಲ್ಲೂ ನನ್ನ ಮೇಲೆ ಹತ್ಯೆಯ ಯತ್ನ ನಡೆದಿದೆ. ಸರಕಾರ ಪ್ರಕರಣವನ್ನು ಕೂಡಲೇ ತನಿಖೆಗೆ ವಹಿಸಬೇಕು. ತನಿಖೆಗೆ ವಹಿಸಿದರೆ ಶಾಸಕ ಸುರೇಶ್ ಬಾಬು ಜೈಲು ಸೇರುವುದು ಖಚಿತ ಎಂದರು.
10 ದಿನ ಮನೆಯಿಂದ ಹೊರಹೋಗದಂತೆ ಶಾಸಕ ಸುರೇಶ್ ಬಾಬು ಕಡೆಯವರೇ ಸೂಚನೆ ನೀಡಿದ್ದಾರೆ. ರಾಜ್ಯ ಸರಕಾರ ಕೂಡಲೇ ನನಗೆ ರಕ್ಷಣೆ ನೀಡಬೇಕು ಎಂದು ಉದ್ಯಮಿ ಟಪಾಲ್ ಗಣೇಶ್ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.