Select Your Language

Notifications

webdunia
webdunia
webdunia
webdunia

‘ಇಂದಿರಾ ಕ್ಯಾಂಟೀನ್ ಊಟಕ್ಕೆ ಬಿಜೆಪಿಯವರು ಜಿರಲೆ ಹಾಕಿಯಾರು’

‘ಇಂದಿರಾ ಕ್ಯಾಂಟೀನ್ ಊಟಕ್ಕೆ ಬಿಜೆಪಿಯವರು ಜಿರಲೆ ಹಾಕಿಯಾರು’
ಬೆಂಗಳೂರು , ಮಂಗಳವಾರ, 22 ಆಗಸ್ಟ್ 2017 (09:24 IST)
ಬೆಂಗಳೂರು: ಅಗ್ಗದ ದರದಲ್ಲಿ ಊಟ ಒದಗಿಸುವ ಉದ್ದೇಶದಿಂದ ನಗರದಲ್ಲಿ ಆರಂಭಿಸಲಾಗಿರುವ ಇಂದಿರಾ ಕ್ಯಾಂಟೀನ್ ಯೋಜನೆ ಕಾಂಗ್ರೆಸ್ ಸರ್ಕಾರದ ಕನಸಿನ ಯೋಜನೆ.

 
ಆದರೆ ಈ ಯೋಜನೆ ಯಶಸ್ವಿಯಾಗುತ್ತಿರುವುದು ಬಿಜೆಪಿಯವರಿಗೆ ಸಹಿಸಲಾಗುತ್ತಿಲ್ಲ. ಹಾಗಾಗಿ ಕ್ಯಾಂಟೀನ್ ಅಡುಗೆಗೆ ಜಿರಲೆಯೋ ಮತ್ತೇನಾದರೂ ಹಾಕುವ ಭಯವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ನಮ್ಮ ಯೋಜನೆ ಯಶಸ್ವಿಯಾಗದಂತೆ ಮಾಡಲು ಬಿಜೆಪಿಯವರು ಏನು ಬೇಕಾದರೂ ಮಾಡಿಯಾರು. ಜಿರಲೆಯಂತಹದ್ದನ್ನು ಏನಾದರೂ ಹಾಕಿ ಊಟ ಕೆಡಿಸಲೂ ಹಿಂಜರಿಯರು ಎಂದು ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

ಈ ನಡುವೆ ಬಡವರಿಗಾಗಿ ತೆರೆದಿರುವ ಕ್ಯಾಂಟೀನ್ ನಲ್ಲಿ ಶ್ರೀಮಂತರೇ ಹೆಚ್ಚು ಫಲ ಪಡೆಯುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಬಡವರಿಗಾಗಿ ಕ್ಯಾಂಟೀನ್ ತೆರೆಯಲಾಗಿದ್ದರೂ, ಶ್ರೀಮಂತರೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ನಿಜವಾದ ಫಲಾನುಭವಿಗಳಿಗೆ ಆಹಾರ ಸಿಗುತ್ತಿಲ್ಲ ಎಂದು ಆರೋಪ ಕೇಳಿಬಂದಿದೆ.

ಇದನ್ನೂ ಓದಿ.. ಅಸಭ್ಯವಾಗಿ ನಡೆದುಕೊಂಡವನ ಬೆವರಿಳಿಸಿದ ಮಿಥಾಲಿ ರಾಜ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟ್ವಿಟರ್ ನಲ್ಲಿ ರಾಹುಲ್ ಗಾಂಧಿ ವಿಚಾರವಾಗಿ ಎಡವಟ್ಟು ಮಾಡಿಕೊಂಡ ಕಪಿಲ್ ಸಿಬಲ್!