Select Your Language

Notifications

webdunia
webdunia
webdunia
webdunia

ಟ್ವಿಟರ್ ನಲ್ಲಿ ರಾಹುಲ್ ಗಾಂಧಿ ವಿಚಾರವಾಗಿ ಎಡವಟ್ಟು ಮಾಡಿಕೊಂಡ ಕಪಿಲ್ ಸಿಬಲ್!

ಟ್ವಿಟರ್ ನಲ್ಲಿ ರಾಹುಲ್ ಗಾಂಧಿ ವಿಚಾರವಾಗಿ ಎಡವಟ್ಟು ಮಾಡಿಕೊಂಡ ಕಪಿಲ್ ಸಿಬಲ್!
ನವದೆಹಲಿ , ಮಂಗಳವಾರ, 22 ಆಗಸ್ಟ್ 2017 (08:45 IST)
ನವದೆಹಲಿ: ಇತ್ತೀಚೆಗೆ ರಾಜಕೀಯ ನಾಯಕರು ಟ್ವಿಟರ್ ನಲ್ಲಿ ಸಕ್ರಿಯರಾಗಿರುವುದು ಹೊಸತೇನಲ್ಲ. ಆಗಾಗ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗುತ್ತಾರೆ. ಆದರೆ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಮಾತ್ರ ಬೇರೇ ರೀತಿ ಎಡವಟ್ಟು ಮಾಡಿಕೊಂಡಿದ್ದಾರೆ.

 
ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿಯ ಟ್ವಿಟರ್ ಖಾತೆಯನ್ನು ಕಪಿಲ್ ಸಿಬಲ್ ಫಾಲೋ ಮಾಡುತ್ತಾರೆ. ಆದರೆ ಭಾನುವಾರ  ಅಕಸ್ಮತ್ತಾಗಿ ರಾಹುಲ್ ಗಾಂಧಿ ಖಾತೆಯನ್ನು ಕಪಿಲ್ ಸಿಬಲ್ ಅನ್
ಫಾಲೋ ಮಾಡಿದ್ದಾರೆ.

ಇದು ಟ್ವಿಟರ್ ನಲ್ಲಿ ಭಾರೀ ವೈರಲ್ ಆಗಿದೆ. ಇದರಿಂದಾಗಿ ಕಪಿಲ್ ಸಿಬಲ್ ಪಕ್ಷವನ್ನೇ ಬಿಡುತ್ತಾರೆ ಎನ್ನುವಂತಹ ಗಾಳಿ ಸುದ್ದಿಗಳೆಲ್ಲಾ ಹಬ್ಬಿದವು. ಕೊನೆಗೆ ತಮ್ಮ ತಪ್ಪು ತಿದ್ದಿಕೊಂಡ ಸಿಬಲ್ ಮತ್ತೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನ ಅಧಿಕೃತ ಖಾತೆಯನ್ನು ಫಾಲೋ ಮಾಡಿದ್ದಾರೆ.

ಇದನ್ನೂ ಓದಿ.. ಒಂದೇ ಒಂದು ಎಳೆನೀರು ಎಷ್ಟೊಂದು ಲಾಭ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ತ್ರಿವಳಿ ತಲಾಕ್ ಪ್ರಕರಣದ ಮಹತ್ವದ ತೀರ್ಪು