ರೌಡಿಗಳ ಕೃತ್ಯಕ್ಕೆ ಕಡಿವಾಣ ಹಾಕಲು ಪಂತ್ ಖಡಕ್​​​ ಸೂಚನೆ:

Webdunia
ಬುಧವಾರ, 7 ಜುಲೈ 2021 (14:36 IST)
ಬೆಂಗಳೂರು: ರಾಜಧಾನಿಯಲ್ಲಿ ಮತ್ತೆ ಶುರುವಾಯ್ತಾ ರೌಡಿಗಳ ದ್ವೇಷ ಎನ್ನುವ ಮಾತು ಮುನ್ನೆಲೆಗೆ ಬಂದಿದ್ದ ಹಿನ್ನೆಲೆ, ಬುಧವಾರದ ಸಭೆಯಲ್ಲಿ ಎಲ್ಲ ಡಿಸಿಪಿಗಳಿಗೂ ಕಮಿಷನರ್ ಎಚ್ಚರಿಕೆ ನೀಡಿರುವುದು ಬೆಳಕಿಗೆ ಬಂದಿದೆ. ರೌಡಿಗಳ ಆ್ಯಕ್ಟಿವಿಟಿ ಮೇಲೆ ಕಣ್ಣಿಡಲು‌ ಖಡಕ್ ಸೂಚನೆಯನ್ನು ಮಂಗಳವಾರ ನಡೆದ ವಾರದ ಪೊಲೀಸ್ ಸಭೆಯಲ್ಲಿ ಕಮಲ್ ಪಂತ್​​ ರವಾನಿಸಿದ್ದಾರೆ.
 
ಇತ್ತೀಚೆಗೆ ಮುಖ್ಯವಾಗಿ ರಶೀದ್ ಮಲಬಾರಿ ಸಹಚರ ಕರೀಂ ಅಲಿ, ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್, ಕೃಷ್ಣಮೂರ್ತಿ ಹಾಗೂ ಫೈನಾನ್ಶಿಯರ್ ಮದನ್ ಕೊಲೆಗಳು ನೆಡೆದಿವೆ.
 
ಜೂನ್ 22 ರಂದು ಗೋವಿಂದಪುರ ಠಾಣಾ ವ್ಯಾಪ್ತಿಯಲ್ಲಿ ನೆಡೆದ ಕರೀಂ ಅಲಿ ಕೊಲೆಯಿಂದ ಶುರುವಾದ ಗ್ಯಾಂಗ್ ವಾರ್ ಪ್ರಕರಣಗಳು ಮುಂದುವರೆದು ಕಾಟನ್ ಪೇಟೆ ಠಾಣೆ ವ್ಯಾಪ್ತಿಯಲ್ಲಿ ಜೂನ್ 24ಕ್ಕೆ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಕೊಲೆ, ಜಯನಗರದಲ್ಲಿ ಜುಲೈ 2ರಂದು ಫೈನಾನ್ಶಿಯರ್ ಮದನ್ ಕೊಲೆ, ಡಿಜೆ ಹಳ್ಳಿಯಲ್ಲಿ 3 ನೇ ತಾರೀಖಿನಂದು ಕೃಷ್ಣ ಮೂರ್ತಿ ಮರ್ಡರ್, ಬ್ಯಾಟರಾಯನಪುರ ಠಾಣಾ ವ್ಯಾಪ್ತಿಯಲ್ಲಿ ಜುಲೈ 7 ರಂದು ಮೃತ ಸ್ಲಂ ಭರತನ ಗ್ಯಾಂಗ್ ಹಾಗೂ ಟಿಂಬರ್ ಕಿಟ್ಟಿ ಹುಡುಗರ ನಡುವೆ ಗ್ಯಾಂಗ್ ವಾರ್ ಪ್ರಕರಣಗಳು ದಾಖಲಾಗಿವೆ.
 
ಇವುಗಳಲ್ಲಿ ಫೈನಾನ್ಶಿಯರ್ ಮದನ್ ಹಾಗೂ ರೇಖಾ ಕೊಲೆ ಹಾಡಹಗಲೇ ನಡೆದಿವೆ. ಬ್ಯಾಟರಾಯನಪುರದ ಗ್ಯಾಂಗ್ ವಾರ್ ಸಹ ಮಧ್ಯಾಹ್ನ ನಡೆದಿತ್ತು. ಉಳಿದಂತೆ ರಶೀದ್ ಮಲಬಾರಿ ಗ್ಯಾಂಗ್ ಹತ್ಯೆಗೆ ಜೈಲಿನಿಂದ ಪ್ಲಾನ್ ಮಾಡಲಾಗಿತ್ತು. ಹೀಗಾಗಿ ರೌಡಿಗಳ ಮೇಲೆ ಖಡಕ್ ಕ್ರಮಕ್ಕೆ ಕಮಲ್‌ಪಂತ್ ಸೂಚನೆ ನೀಡಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಬುಧವಾರ ಡಿಸಿಪಿಗಳು ಸಂಬಂಧಪಟ್ಟ ಠಾಣೆಯ ಇನ್ಸ್​​ಪೆಕ್ಟರ್​ಗೆ ಸೂಚನೆ ರವಾನಿಸಿರುವ ಮಾಹಿತಿ ಲಭ್ಯವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

6ವರ್ಷದ ವೆನ್ನೆಲಾಳ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ

ತಂದೆ ನಿಧನದ ಬಳಿಕ ತಾಯಿ ತಂಗಿಯ ಖುಷಿಗಾಗಿಯೇ ಹೋರಾಡುತ್ತಿದ್ದ ಯುವಕ ಹಿಂಗ್ಯಾಕೆ ಮಾಡಿದ, ಮನಕಲುಕುವ Video

ಕೊಲ್ಲೂರು ಮೂಕಾಂಬಿಕೆಯ ನೋಡಲು ಬಂದರೆ ತಮಿಳುನಾಡು ಸಿಎಂ ವಿಜಯ್ ನೋಡಲೆಂದೇ ಹರಿದುಬಂದ ಜನಸಾಗರ Video

ಫ್ರೀ ಫ್ರೀ ಎನ್ನುತ್ತಿದ್ದ ಕಾಂಗ್ರೆಸ್ ಗ್ಯಾರಂಟಿ ನಿಲ್ಲಿಸಲು ಹುನ್ನಾರ ನಡೆಸಿದೆ: ಬಿ ಶ್ರೀರಾಮುಲು

ಧರ್ಮಸ್ಥಳ ಪ್ರಕರಣದಲ್ಲಿ ಪ್ರಕಾಶ್ ರಾಜ್ ಹೆಸರು ಥಳುಕು: ಅವರು ಕ್ರಿಮಿನಲ್ ಅಲ್ಲ ಗೃಹಸಚಿವ

ಮುಂದಿನ ಸುದ್ದಿ
Show comments