Select Your Language

Notifications

webdunia
webdunia
webdunia
webdunia

ಕೋಣನಕುಂಟೆ ರೌಡಿಶೀಟರ್ ಮಧುಸೂದನ್ ಅರೆಸ್ಟ್:

bangalore
bangalore , ಬುಧವಾರ, 7 ಜುಲೈ 2021 (14:29 IST)
ಬೆಂಗಳೂರು: "ಗನ್ ಹಿಡಿದರೆ ಫೀಲ್ ಬೇರೆ" ಎನ್ನುತ್ತಾ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಫ್ತಾ ವಸೂಲಿ ಮಾಡ್ತಿದ್ದ ರೌಡಿಶೀಟರ್ ಮಧುಸೂಧನ್ ಅಲಿಯಾಸ್ ಗನ್ ಮಧುನನ್ನು ಇಂದು ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಜೈಲಿಂದ ರಿಲೀಸ್ ಆಗಿ ಹೊರಬಂದಿದ್ದ ಆರೋಪಿ ಕಳ್ಳತನ ಎಸಗಲು ಇಳಿದಾಗ ಹೆಡೆಮುರಿ ಕಟ್ಟಿದ್ದಾರೆ.
 
ಕೊಲೆ ಕೇಸ್​ನಿಂದ ಹೊರಬಂದ ನಂತರ ರಾಬರಿಗೆ ಇಳಿದಿದ್ದ ಮಧು ಮತ್ತು ಆತನ ಬಳಿಯಿದ್ದ ಪಿಸ್ತೂಲ್ಅ​ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೋಣನಕುಂಟೆ ರೌಡಿಶೀಟರ್ ಆಗಿದ್ದ ಮಧುಸೂದನ್ ಅಲಿಯಾಸ್ ಗನ್ ಮಧು ಜಂಬೂಸವಾರಿ ದಿಣ್ಣೆಯಲ್ಲಿ ದರೋಡೆಗೆ ನಿಂತಿದ್ದ ವೇಳೆ ವಶಕ್ಕೆ ಪಡೆದಿದ್ದರು. ಜೈಲಿಗೆ ಹೋಗಿ ಬಂದಿದ್ದಕ್ಕೆ ಹಣಕಾಸಿನ ತೊಂದರೆಯಾಗಿತ್ತು. ಈ ಕಾರಣಕ್ಕೆ ಮತ್ತೆ ಗನ್ ಹಿಡಿದಿದ್ದೆ ಎಂದ ಮಧು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.ಒಂದು ಕೊಲೆ, ಕೊಲೆಯತ್ನ, ರಾಬರಿ ಸೇರಿ ನಾಲ್ಕು ಕೇಸ್​ಗಳಲ್ಲಿ ಭಾಗಿಯಾಗಿದ್ದ ಈತ ಸಿಕ್ಸ್ ಪ್ಯಾಕ್ ಮಾಡಿ ಹವಾ ಮೆಂಟೈನ್ ಮಾಡಿದ್ದನಂತೆ. ಮಚ್ಚು, ಲಾಂಗು, ಡ್ರ್ಯಾಗರ್ ಮುಟ್ಟುತ್ತಿರಲಿಲ್ಲ. ಆದರೆ ಗನ್ ಹಿಡಿದು ರಿಯಲ್ ಎಸ್ಟೇಟ್ ಬಿಲ್ಡರ್​ಗಳಿಗೆ ಹೆದರಿಸಿ ಹಫ್ತಾ ವಸೂಲಿ ಮಾಡಿಕೊಂಡಿದ್ದನಂತೆ."ಗನ್ ಹಿಡಿದುಕೊಂಡರೆ ಆ ಫೀಲೇ ಬೇರೆ ಸರ್" ಎಂಬ ಆರೋಪಿಯ ಮಾತಿಗೆ ಪೊಲೀಸರೇ ದಂಗಾಗಿದ್ದಾರೆ. ಮಧು ಪಾರಿವಾಳ ಸಾಕೋದು, ಟಿಕ್ ಟಾಕ್ ಮಾಡೋ ಹವ್ಯಾಸ ಹೊಂದಿದ್ದನಂತೆ. ಕೇವಲ 25 ವರ್ಷಕ್ಕೆ ಮೋಸ್ಟ್ ವಾಂಟೆಡ್ ಲಿಸ್ಟ್​ಗೆ ಸೇರಿರುವ ರೌಡಿಶೀಟರ್ ಈತನಾಗಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆ ತಕ್ಷಣವೇ ಜಾರಿ ಮಾಡಿ: ರಾಜ್ಯ ಯುವ ವಕೀಲರ ಟೀಂನಿಂದ ಗೃಹ ಸಚಿವ ಬೊಮ್ಮಾಯಿಗೆ ಮನವಿ