Select Your Language

Notifications

webdunia
webdunia
webdunia
webdunia

ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆ ತಕ್ಷಣವೇ ಜಾರಿ ಮಾಡಿ:

ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆ ತಕ್ಷಣವೇ ಜಾರಿ ಮಾಡಿ:
bangalore , ಬುಧವಾರ, 7 ಜುಲೈ 2021 (14:20 IST)
ಬೆಂಗಳೂರು: ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆ ತಕ್ಷಣ ಜಾರಿಗೆ ತರುವಂತೆ ರಾಜ್ಯ ಯುವ ವಕೀಲರ ಟೀಂ ಸರ್ಕಾರಕ್ಕೆ ಮನವಿ ಮಾಡಿದೆ. ವಕೀಲ ಶ್ರೀನಿಧಿ ಲಿಂಗಪ್ಪ ಮತ್ತು ಹಲವು ಪದಾಧಿಕಾರಿಗಳು ಗೃಹ ಸಚಿವರನ್ನು ಭೇಟಿ ಮಾಡಿ ಬುಧವಾರ ವಿನಂತಿಸಿದರು.  
 
ರಾಜ್ಯದ ಅನೇಕ ರಾಜ್ಯಗಳು ಈ ಕಾಯ್ದೆ ಅನುಷ್ಠಾನ ಮಾಡಿದ್ದಾರೆ. ಅದರಂತೆ ನಮ್ಮ ರಾಜ್ಯದಲ್ಲೂ ಅನುಷ್ಠಾನ ಮಾಡಿ, ರಾಜ್ಯದಲ್ಲಿ ಮತಾಂತರಗಳ ಕೇಸ್ ಗಳು ಹೆಚ್ಚಾಗುತ್ತಿರುವ ಹಿನ್ನಲೆ ಈ ಬಗ್ಗೆ ಸರ್ವೆ ನಡೆಸಿ ಮನವಿ ಪತ್ರ ಸಲ್ಲಿಸಿದ್ದೇವೆ. ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳುವುದಾಗಿ ಬೊಮ್ಮಾಯಿ ಭರವಸೆ ನೀಡಿದ್ದಾರೆ ಎಂದು ವಕೀಲ ಶ್ರೀನಿಧಿ ಲಿಂಗಪ್ಪ ತಿಳಿಸಿದ್ದಾರೆ.
 
ಅರ್ಜಿಯಲ್ಲಿನ ಪ್ರಮುಖ ಅಂಶಗಳು:
 
ರಾಜ್ಯದಲ್ಲಿ ಮುಗ್ಧ ಎಸ್ಸಿ & ಎಸ್ಟಿ ಸಮುದಾಯವನ್ನ ಟಾರ್ಗೇಟ್ ಮಾಡಲಾಗುತ್ತಿದೆ. ಮಾನಸಿಕವಾಗಿ ದುರ್ಬಲರನ್ನು ಒಂದು ಟೀಂ ಟಾರ್ಗೇಟ್ ಮಾಡಿದೆ.
ಹಣದ ಆಮಿಷ ನೀಡಿ, ಸುಳ್ಳು ಭರವಸೆ ಕೊಟ್ಟು ಮತಾಂತರ ನೆಡೆಸಲಾಗುತ್ತಿದೆ. ಕೊಡಗು, ಚಾಮರಾಜನಗರ & ಮೈಸೂರು ಗ್ರಾಮೀಣ ಭಾಗದಲ್ಲಿ ಮತಾಂತರ ಹೆಚ್ಚಾಗಿದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
 
ಪ್ರತಿ ಭಾನುವಾರ ಮುಗ್ಧರ ಟಾರ್ಗೇಟ್ ಮಾಡಲಾಗುತ್ತಿದೆ. ಗುರುತಿನ ಚೀಟಿಯಲ್ಲಿ ಕ್ರಿಶ್ಚಿಯನ್ ಅಂತಾ ಹಾಕದಂತೆ ಸೂಚನೆ ನೀಡಲಾಗುತ್ತಿದೆ. ಕ್ರಿಶ್ಚಿಯನ್ ಧರ್ಮ ಪಾಲನೆ ಮಾಡಿ, ಸರ್ಕಾರದ ಎಸ್.ಸಿ ಎಸ್. ಟಿ ಸವಲತ್ತು ಪಡೆಯಿರಿ. ಪ್ರತಿ ಬಾರಿಯೂ ಈ ಬಗ್ಗೆ ಕೆಲ ಪಾದ್ರಿಗಳು ಭೋದನೆ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
 
ಕೊಡಗಿನ ಕಾಡು ಕುರುಬರು, ಯರವರನ್ನು ಹೆಚ್ಚು ಟಾರ್ಗೇಟ್ ಮಾಡಿ ರುವ ಮತಾಂತರಿಗಳ ವಿರುದ್ದ ಕ್ರಮಕ್ಕೆ ಕಠಿಣ ಕಾನೂನು ಇಲ್ಲ, ಬುಡಕಟ್ಟು ಜನರ ಮುಗ್ಧತೆ ದುರ್ಬಳಕೆ ಈಶಾನ್ಯ ರಾಜ್ಯಗಳೇ ಉದಾಹರಣೆ ಹೀಗಾಗಿ ತಕ್ಷಣವೇ ಈ ಕಾಯ್ದೆ ಅನುಷ್ಠಾನ ಮಾಡಬೇಕು ಎಂದು ಮನವಿ ಮಾಡಿದ್ದಾರೆ
 
ಪರೋಕ್ಷವಾಗಿ ದೇಶವನ್ನ ದುರ್ಬಲಗೊಳಿಸುವ ಹುನ್ನಾರವಾಗಿದ್ದು. ಹೊರ ದೇಶದವರು ಈ ರೀತಿ ಮತಾಂತರದ ಮೂಲಕ ಷಡ್ಯಂತ್ರ ಮಾಡುತ್ತಿದ್ದಾರೆ.
ಮುಂದೆ ದೇಶಕ್ಕೆ ಮಾರಕವಾಗುವ ಸಾಧ್ಯತೆ ಇದೆ.
ಅಮಾಯಕ ಹಿಂದೂಗಳ ರಕ್ಷಣೆ ಮಾಡಬೇಕು
ಬೇರೆ ರಾಜ್ಯಗಳಂತೆ ಕರ್ನಾಟಕದಲ್ಲಿ ಜಾರಿ ಮಾಡಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಸಚಿವ ಸ್ಥಾನಕ್ಕೆ ಸದಾನಂದ ಗೌಡ ರಾಜೀನಾಮೆ