Publish Date: Tue, 25 Jul 2023 (17:24 IST)
Updated Date: Tue, 25 Jul 2023 (17:46 IST)
ಮಹಿಳೆಯರಿಗೆ ಫ್ರೀ ನನಗೂ ಪ್ರೀ ಕೊಡಿ ಅಂತ ಯುವಕ ಕಿರಿಕ್‌ಮಾಡಿದ ಅನ್ನೋ ಆರೋಪ ಹಿನ್ನೆಲೆ ಬಸ್ ನಲ್ಲಿ ಯುವಕ ಮತ್ತು ನಿರ್ವಾಹಕ ಕೈ ಕೈ ಮಿಲಾಯಿಸಿದ್ದಾರೆ.ರಾಮಯ್ಯ ಆಸ್ಪತ್ರೆ ಬಳಿ ಬಿಎಂಟಿಸಿ ಬಸ್ ಹತ್ತಿದ ಯುವಕ ಮತ್ತಿಕೆರೆಗೆ ಟಿಕೆಟ್ ಕೇಳಿದ್ದ, ಕಂಡಾಕ್ಟರ್ ಕೂಡ ಮತ್ತಿಕೆರೆಗೆ ಟಿಕೆಟ್ ನೀಡಿದ್ರು. ಈ ವೇಳೆ ಮಹಿಳೆಯರಿಗೆ ಚಾರ್ಜ್ ಇಲ್ಲ ನಮಗ್ಯಾಕೆ ಎಂದು ಯುವಕ ತಗಾದೆ ತೆಗೆದಿದ್ದ, ಟಿಕೆಟ್ ಹಣ ನೀಡುವಂತೆ ಕಂಡಕ್ಟರ್ ಪಟ್ಟು ಹಿಡಿದಕದ್ರು,ಈ ವೇಳೆ ಮಾತಿಗೆ ಮಾತು ಬೆಳೆದು ಯುವಕ ಮತ್ತು ನಿರ್ವಾಹಕ ಕೈಕೈ ಮಿಲಾಯಿಸಿಕೊಂಡಿದ್ದಾರೆ.