Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಗುಂಡಿಗಳಿಗೆ ಸವಾರರು ಬಲಿ: ವರದಿ ಕೇಳಿದ ರಾಹುಲ್ ಗಾಂಧಿ

ಬೆಂಗಳೂರಿನಲ್ಲಿ ಗುಂಡಿಗಳಿಗೆ ಸವಾರರು ಬಲಿ: ವರದಿ ಕೇಳಿದ ರಾಹುಲ್ ಗಾಂಧಿ
ಬೆಂಗಳೂರು , ಭಾನುವಾರ, 15 ಅಕ್ಟೋಬರ್ 2017 (08:49 IST)
ಬೆಂಗಳೂರು: ಭಾರೀ ಮಳೆಯಿಂದ ನಗರದ ಹಲವು ರಸ್ತೆಗಳು ಗುಂಡಿಮಯವಾಗಿವೆ. ಹೀಗಾಗಿ ಇದರಿಂದ ಸಾವನ್ನಪ್ಪಿರುವ ಹಾಗೂ ಭಾರೀ ಮಳೆಗೆ ಬಲಿಯಾದ ಘಟನೆಗಳಿಗೆ ಸಂಬಂಧಿಸಿದಂತೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವರದಿ ನೀಡುವಂತೆ ಸಿದ್ದರಾಮಯ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ ಎನ್ನಲಾಗಿದೆ.

ನಗರದಲ್ಲಿ15 ದಿನದಿಂದ ಸುರಿಯುತ್ತಿರುವ ಮಹಾಮಳೆಗೆ ರಸ್ತೆಗಳಲ್ಲಿ ಗುಂಡಿ ಬಿದ್ದು ನಾಲ್ವರು ಬಲಿಯಾಗಿದ್ದಾರೆ. ಅ.13ರಂದು ಸುರಿದ ಮಳೆಗೆ ಐವರು ಮೃತಪಟ್ಟಿದ್ದಾರೆ. ಇಷ್ಟೆಲ್ಲಾ ಅನಾಹುತ ಸಂಭವಿಸಿದ್ದರೂ ನೀವೇನ್ ಕ್ರಮ ತೆಗೆದುಕೊಂಡಿದ್ದೀರಿ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಮೂಲಕ ಸಿಎಂ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‍ಗೆ ಸಂದೇಶ ರವಾನಿಸಿದ್ದಾರೆ. ಪರಮೇಶ್ವರ್‍ಗೂ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಲಗ್ಗೆರೆಯಲ್ಲಿ ನೀರಿಗೆ ಕೊಚ್ಚಿ ಹೋಗಿದ್ದ ತಾಯಿ,  ಮಗಳ ಮೃತದೇಹಕ್ಕಾಗಿ ಶೋ‍ಧ ಕಾರ್ಯ ಮುಂದುವರೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿಗೆ ಸಚಿವೆ ಸ್ಮೃತಿ ಇರಾನಿಯ ವಿಶಿಷ್ಟ ತಿರುಗೇಟು