Publish Date: Thu, 12 Oct 2017 (08:53 IST)
Updated Date: Thu, 12 Oct 2017 (08:55 IST)
ಬೆಂಗಳೂರು: ಮಳೆಗಾಲ ಮುಗಿಯುವ ಕಾಲ ಬಂದರೂ ರಾಜ್ಯದಲ್ಲಿ ವರುಣನ ಅಬ್ಬರ ಮುಂದುವರಿದಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನಿನ್ನೆಯೂ ಧಾರಾಕಾರ ಮಳೆಯಾಗಿದ್ದೂ ಇಂದೂ ಮೋಡ ಕವಿದ ವಾತಾವರಣವಿದೆ.
ಬೆಂಗಳೂರು, ಕೋಲಾರ, ವಿಜಯಪುರ, ಚಾಮರಾಜನಗರ, ಮೈಸೂರು ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ. ಮಳೆಯಿಂದಾಗಿ ಮೂವರು ಮೃತಪಟ್ಟಿದ್ದು ಒಂಭತ್ತು ಮಂದಿಗೆ ಗಾಯಗಳಾಗಿರುವ ವರದಿಗಳಾಗಿವೆ.
ಚಾಮರಾಜನಗರದಲ್ಲಿ ಪ್ರವಾಹ ಭೀತಿಯಿದ್ದು, ಶಾಲೆಯೊಳಗೆ ಸಿಲುಕಿದ್ದ ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ. ವಿಜಯಪುರದಲ್ಲಿ ಮನೆಯ ಗೋಡೆ ಕುಸಿದು ಒಂದೇ ಕುಟುಂಬದ ಇಬ್ಬರು ಮೃತಪಟ್ಟಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಯುವಕನೋರ್ವ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾನೆ. ಇಂದೂ ಕೂಡಾ ಮಳೆ ಮುಂದುವರಿಯುವ ನಿರೀಕ್ಷೆಯಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ